ಸೆ.26ರಿಂದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

0

  • ಅ.2 ಧಾರ್ಮಿಕ ಸಭೆ, ಕುಂಜೂರು ಶ್ರೀ ದುರ್ಗೆ ಧ್ವನಿಮುದ್ರಣ ಲೋಕಾರ್ಪಣೆ
  • ಸೆ.4 ಚಂಡಿಕಾಯಾಗ, ಆಯುಧ ಪೂಜೆ
  • ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.26ರಿಂದ ಪ್ರಾರಂಭಗೊಂಡು ಅ.4ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಸೆ.26ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ನವರಾತ್ರಿ ಉತ್ಸವದಲ್ಲಿ ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯಪೂಜೆ, ದುರ್ಗಾಪೂಜೆ, ರಂಗಪೂಜೆ, ಮಹಾಮಂಗಳಾರತಿ ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ.

ಅ.2 ಧಾರ್ಮಿಕ ಸಭೆ, ಕುಂಜೂರು ಶ್ರೀ ದುರ್ಗೆ ಧ್ವನಿಮುದ್ರಣ ಲೋಕಾರ್ಪಣೆ
ನವರಾತ್ರಿ ಉತ್ಸವದಲ್ಲಿ ಅ.2ರಂದು ಸಂಜೆ 6 ಗಂಟೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆಎಂಎಫ್ ಬೆಂಗಳೂರು ಇದರ ಜಂಟಿ ನಿರ್ದೇಶಕ ಡಾ.ರಾಮಕೃಷ್ಣ ಭಟ್ ಮುದ್ರಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಖ್ಯಾತ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ ಭಂಡಾರಿ ಕೂಟೇಲು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿಗೀತೆಗಳ ಧ್ವನಿಮುದ್ರಣ `ಕುಂಜೂರು ಶ್ರೀ ದುರ್ಗೆ’ ಯೂಟ್ಯೂಬ್ ಚಾನೆಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ನಂತರ ಮಧ್ವಾಧೀಶ ವಿಠಳದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ `ದಾಸ ಭಕ್ತಿಮಂಜರಿ’ ನಡೆಯಲಿದೆ.

ಸೆ.4 ಚಂಡಿಕಾಯಾಗ, ಆಯುಧ ಪೂಜೆ:
ನವರಾತ್ರಿ ಉತ್ಸವದ ಅಂಗವಾಗಿ ಅ.4ರಂದು ಬೆಳಿಗ್ಗೆ ಗಣಪತಿ ಹವನ ನಡೆದ ಬಳಿಕ ಸಾಮೂಹಿಕ ಚಂಡಿಕಾಯಾಗ ಪ್ರಾರಂಭಗೊಳ್ಳಲಿದೆ. ನಂತರ ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಪೂರ್ಣಾಹುತಿ, ಸಂಜೆ 3 ಗಂಟೆಯಿAದ ಆಯುಧ ಪೂಜೆಯು ನಡೆಯಲಿದೆ.

ಅ.5 ಅಕ್ಷರಾಭ್ಯಾಸ
ಅ.5ರ ವಿಜಯದಶಮಿಯಂದು ಕ್ಷೇತ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ ಎಂದು ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ….!
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೆ.26ರಂದು ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದವರಿಂದ `ಕದಂಬ ಕೌಶಿಕೆ’ ಎಂಬ ಯಕ್ಷಗಾನ ತಾಳಮದ್ದಳೆ, ಸೆ.27ರಂದು ಈಶ್ವರದಾಸ ಕೊಪ್ಪೇಸರ ಇವರಿಂದ `ಸೀತಾ ಕಲ್ಯಾಣ’ ಹರಿಕಥೆ, ಸೆ.28ರಂದು ಮಂಚಿ ಬೋಳಂತೂರು ವಸುಧಾರಾ ಸಾಂಸ್ಕೃತಿಕ ಕಲಾ ಸಂಘದವರಿಂದ `ನೃತ್ಯ ವೈಭವ’, ಸೆ.29ರಂದು ಧೀಶಕ್ತಿ ಬಾಲಿಕಾ ಯಕ್ಷ ಬಳಗದವರಿಂದ `ಶ್ರೀಕೃಷ್ಣ ಲೀಲೆ-ಕಂಸವಧೆ” ಹಾಗೂ ಧೀ ಶಕ್ತಿ ಮಹಿಳಾ ಯಕ್ಷ ಬಳಗದವರಿಂದ `ಸುಧನ್ವಾರ್ಜುನ ಕಾಳಗ’ ಎಂಬ ತಾಳಮದ್ದಳೆ, ಸೆ.30ರಂದು ಪ್ರಾರ್ಥನಾ ಮತ್ತು ಆರಾಧನಾ ಸಹೋದರಿಯರು ಬಂಗಾರಡ್ಕ ಇವರಿಂದ `ಕರ್ನಾಟಕ ಶಾಸ್ತ್ರೀಯ ಸಂಗೀತ’, ಅ.1ರಂದು ಯಕ್ಷಶ್ರೀ ಹವ್ಯಾಸಿ ಬಳಗದವರಿಂದ `ಸತೀ ಸುಕನ್ಯಾ’ ಯಕ್ಷಗಾನ ತಾಳಮದ್ದಳೆ, ಅ.2ರಂದು ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ `ದಾಸ ಭಕ್ತಿಮಂಜರಿ, ಅ.3ರಂದು ಮಚ್ಚಿಮಲೆ ಜಯಂತಿ ಹೆಬ್ಬಾರ್ ಬಳಗದವರಿಂದ `ಭಕ್ತಿ ಸಂಗೀತ, ವಿಟ್ಲ ಪೃಥ್ವೀ ಮತ್ತು ಬಳಗದರಿಂದ `ಭರತನಾಟ್ಯ ಹಾಗೂ ಅ.4ರಂದು ಯಕ್ಷಕೂಟ ಪುತ್ತೂರು ಇದರ ಸದಸ್ಯರುಗಳಿಂದ `ಭೃಗು ಶಾಪ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here