ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಮಾಹಿತಿ ಕಾರ್ಯಾಗಾರ 

0

ಸಮಾಜದಲ್ಲಿ ಮೌಲ್ಯಯುತವಾದ ಮೊರೆಲ್ ಶಿಕ್ಷಣ ಅಗತ್ಯ – ಶ್ರೀಲತಾ 
ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಲಯನ್ಸ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ಸೆ.೨೩ರಂದು ಇಲ್ಲಿನ ಲಯನ್ಸ್ ಸೇವಾ ಮಂದಿರದಲ್ಲಿ ಮಾಹಿತಿ ಕಾರ್ಯಕ್ರಮ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರದ ತ್ರೈಮಾಸಿಕ ಸಭೆ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ  ಮಾಹಿತಿ ನೀಡಿದರು. ಶಿಕ್ಷಣದ ಮೂಲಕ ಪ್ರತಿ ಮನೆಯಲ್ಲೂ ನಾವು ಒಂದಲ್ಲ ರೀತಿಯ  ಸಂಬಂದ ಇದೆ. ಬೇಸಿಕ್ ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂದ ಅವರು ದೇಶದ ಪ್ರಗತಿ ಕಾಣಲು ಶಿಕ್ಷಣ ಮುಖ್ಯ. ಅದೇ ರೀತಿ ಸಂಸ್ಕಾರಯುತ ಶಿಕ್ಷಣ ಸಿಕ್ಕಿದಾಗ ಸ್ವಾಸ್ತ್ಯ ಸಮಾಜ ಕಾಣಲು ಸಾಧ್ಯ. ಹಲವು ಕಡೆ ಸಮಾಜದಲ್ಲಿ ಕುಟುಂಬ ಸಮಸ್ಯೆ ಇರಬಹುದು. ಇಂತಹ ಸಂದರ್ಭದಲ್ಲು ಅವರ ಕಣ್ಣು ತೆರೆಸುವ ಕೆಲಸ ಆಗಬೇಕು. ಇವತ್ತು ಮೌಲ್ಯಯುತವಾದ ಮೊರೆಲ್ ಶಿಕ್ಷಣ ಅಗತ್ಯ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ಗಣೇಶ್ ಶೇಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಪನ್ಮೂಲ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ವತ್ಸಲಾ, ರೋಹಿಣಿ ರಾಘವ ಆಚಾರ್ಯ, ಪೆಡ್ರಿಕ್, ಶಾರದಾ ಕೇಶವ್ ಅತಿಥಿಗಳನ್ನು ಗೌರವಿಸಿದರು. ನ್ಯಾಯವಾದಿ ರಾಜೇಶ್ವರಿ ಪ್ರಾರ್ಥಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಅಂಬಿಕಾ ರಮೇಶ್ ವಂದಿಸಿದರು.

LEAVE A REPLY

Please enter your comment!
Please enter your name here