ಕಥಾಬಿಂದು ರಾಜ್ಯೋತ್ಸವ ಪುರಸ್ಕಾರಕ್ಕೆ ಶಾಂತಾ ಪುತ್ತೂರು ಆಯ್ಕೆ

0

ಪುತ್ತೂರು : ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವಾಯ್ಸ್ ಆಫ್ ಆರಾಧನಾ ಆಶ್ರಯದಲ್ಲಿ ಯುಗಪುರುಷ ಕಿನ್ನಿಗೋಳಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಕೊಡಮಾಡುವ ಕಥಾಬಿಂದು ರಾಜ್ಯೋತ್ಸವ ಪುರಸ್ಕಾರಕ್ಕೆ ಸಾಹಿತ್ಯ ಸೇವೆಗಾಗಿ ಶಾಂತಾ ಪುತ್ತೂರು ಆಯ್ಕೆಯಾಗಿದ್ದಾರೆ.‌

ಶಾಂತಾ ಪುತ್ತೂರು ಶಿಕ್ಷಕಿಯಾಗಿದ್ದು ಪ್ರಸ್ತುತ ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದು ಯೋಗ ಡಿಪ್ಲೊಮಾ ಮಾಡಿರುತ್ತಾರೆ. ಇವರು ಬೊಳುವಾರು ನಿವಾಸಿಯಾಗಿದ್ದು ಇವರ ಸೌರಭ ಕವನ ಸಂಕಲನ ಬಿಡುಗಡೆಗೊಂಡಿದೆ. ಅನೇಕ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದು ಹಲವು ಸಾಹಿತ್ಯ ಕಮ್ಮಟ ನಡೆಸಿರುತ್ತಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಇವರ ಕವನ ಪ್ರಸಾರಗೊಂಡಿದೆ. ಶಾಂತಿವನಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಯ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ದ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಯೋಗರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯಮಟ್ಟದ ಯೋಗಾಸನ ತೀರ್ಪುಗಾರರು. ಪ್ರಸ್ತುತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ರಾಗಿದ್ದು , ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿದ್ದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು. ಇವರು ಶಿಕ್ಷಣ ಜ್ಞಾನ ಪತ್ರಿಕೆಯವರಿಂದ ಜ್ಞಾನಸಿಂಧು ರಾಜ್ಯ ಪ್ರಶಸ್ತಿ, ಕಥಾಬಿಂದು ಪ್ರಕಾಶನದವರಿಂದ ಚೈತನ್ಯಶ್ರೀ ರಾಜ್ಯ ಪ್ರಶಸ್ತಿ, ಬರಹಗಾರರ ಬಳಗದಿಂದ ಸಾಹಿತ್ಯ ಸಿಂಧು ರಾಜ್ಯ ಪ್ರಶಸ್ತಿ, ಸಿರಿಗನ್ನಡ ವೇದಿಕೆಯಿಂದ ಗುರುಕುಲ ತಿಲಕ ಪ್ರಶಸ್ತಿ, ಶಿಕ್ಷಣ ಹಾಗೂ ಸಾಹಿತ್ಯ ಸೇವೆಗೆ ಜಾಗೃತಿ ಟ್ರಸ್ಟ್ ಬೆಂಗಳೂರು ಇವರಿಂದ ಕೆಂಪೇಗೌಡರ ತಾಯಿಯ ಹೆಸರಿನಲ್ಲಿ ಮಹಿಳಾ ಸಾಧಕರಿಗೆ ಕೊಡಮಾಡುವ ಕೆಂಪಮ್ಮ ರಾಜ್ಯ ಪ್ರಶಸ್ತಿ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕವಿ ಕಾವ್ಯ ಸಂಭ್ರಮದಲ್ಲಿ ಯುಗಪುರುಷ ಅವಾರ್ಡ್ 2022 ಸೇರಿದಂತೆ ಹಲವು ರಾಜ್ಯ ಪ್ರಶಸ್ತಿ ಗಳು ಲಭಿಸಿವೆ.ಗೈಡ್ಸ್ ಲಾಂಗ್ ಸರ್ವಿಸ್ ಅವಾರ್ಡ್, ಯೋಗಭೂಷಣ ಪ್ರಶಸ್ತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here