ಪುತ್ತೂರಿನಲ್ಲಿ ಸರಕಾರಿ ಬ್ಲಡ್ ಬ್ಯಾಂಕ್ ಆರಂಭಕ್ಕೆ ಮನವಿ

ಪುತ್ತೂರು: ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ಪರಿಸರದ ಬಡ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪುತ್ತೂರಿನಲ್ಲಿ ಸರಕಾರಿ ಬ್ಲಡ್ ಬ್ಯಾಂಕ್ ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಮನವಿ ನೀಡಿದೆ.

ಸಹಾಯಹಸ್ತ ಲೋಕಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಶಾಸಕರಿಗೆ ಮನವಿ ನೀಡಿದರು.

ಆಸುಪಾಸಿನ ಐದು ತಾಲೂಕಿನಲ್ಲಿ ಯಾವುದೇ ಸರಕಾರಿ ರಕ್ತನಿಧಿ ಘಟಕ ಇರುವುದಿಲ್ಲ. ಆದ್ದರಿಂದ ಪುತ್ತೂರಿನಲ್ಲಿ ರಕ್ತನಿಧಿ ಘಟಕ ಆರಂಭಿಸಿದರೆ, ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಈ ಐದು ತಾಲೂಕುಗಳಲ್ಲಿ ಯಾವುದೇ ರಕ್ತನಿಧಿ ಘಟಕ ಅಥವಾ ಬ್ಲಡ್ ಬ್ಯಾಂಕ್ ಇಲ್ಲದೇ ಇರುವುದರಿಂದ, ಬಡರೋಗಿಗಳು ಮಂಗಳೂರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಬಡವರ ಅನುಕೂಲತೆ ದೃಷ್ಟಿಯಿಂದ ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಒಂದು ರಕ್ತನಿಧಿ ಘಟಕವನ್ನು ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.