ಬೆಟ್ಟಂಪಾಡಿ; ಮುಖ್ಯ ಮಂತ್ರಿಗಳ ನೈಸರ್ಗಿಕ ಕೃಷಿ ಪರಿಚಯ ಕಾರ್ಯಕ್ರಮ-ಜೈವಿಕ ಗೊಬ್ಬರ ವಿತರಣೆ

ನಿಡ್ಪಳ್ಳಿ; ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ಮುಖ್ಯ ಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ, ಬ್ರಹ್ಮಾವರ ಹಾಗೂ ಕೃಷಿ ಇಲಾಖೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಬೆಟ್ಟಂಪಾಡಿ ಗ್ರಾಮದ ಕೂವೆಂಜ ಅನಿತಾರವರ ಮನೆಯಲ್ಲಿ ಮುಖ್ಯ ಮಂತ್ರಿಗಳ ನೈಸರ್ಗಿಕ ಕೃಷಿ ಪರಿಚಯ ಮತ್ತು ಸಹ್ಯಾದ್ರಿ ಜೈವಿಕ ಗೊಬ್ಬರ ವಿತರಣೆ ಕಾರ್ಯಕ್ರಮ ಅ.29ರಂದು ನಡೆಯಿತು.

ಪ್ರಗತಿಪರ ಸಾವಯವ ಕೃಷಿಕ ಎ.ಪಿ.ಸದಾಶಿವ ಮರಿಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿ ತನ್ನ ಅನುಭವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಬ್ರಹ್ಮಾವರ ಸಂಶೋಧನಾ ಕೇಂದ್ರದ ಸಹ ಸಂಶೋಧಕ ಡಾ.ಮಹಾಂತೇಶ್‌ರವರು ರೈತರಿಗೆ ತರಕಾರಿ ಬೀಜ ವಿತರಿಸಿ ತರಕಾರಿ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಸಹ ಸಂಶೋಧಕ ಡಾ.ಸಂತೋಷ ಗೌಡ ಜಿ.ಬಿ ರೈತರಿಗೆ ಸಹ್ಯಾದ್ರಿ ಜೈವಿಕ ಗೊಬ್ಬರ ವಿತರಿಸಿ ಅದರ ಬಳಕೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಈ ಗೊಬ್ಬರ ಹೆಚ್ಚಾಗಿ ಬಳಸುವಂತೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು ಮಾತನಾಡಿ ರೈತರ ಬೆಳೆಗಳಿಗೆ ರೈತ ಉತ್ಪಾದಕ ಸಂಘಗಳ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಒತ್ತು ನೀಡಬೇಕು ಎಂದು ಹೇಳಿದರು.

ವಿಜ್ಞಾನಿಗಳಾದ ಡಾ.ಶಿವಕುಮಾರ್, ಅಶ್ವಿನಿ, ಅನುಪಮಾ, ಶೈಲೇಶ್, ಪ್ರೃಥ್ವಿರಾಜ್, ಸ್ವಾತಿ ಶೆಟ್ಟಿ ಹಾಗೂ ಪ್ರಗತಿಪರ ಕೃಷಿಕರಾದ ಅನಿತಾ ಕೂವೆಂಜ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.