ಪುತ್ತೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ ರೊಟರ್ಯಾಕ್ಟ್ ವಲಯ ಮಟ್ಟದ ಸ್ವಚ್ಛತಾ ಕಾರ್ಯಕ್ರಮ ಬಿರುಮಲೆ ಗುಡ್ಡದಲ್ಲಿ ಅ. 30ರಂದು ನಡೆಯಿತು.
ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈಶ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ‘ಮಣ್ಣು ರಕ್ಷಿಸಿ’ (ಸೇವ್ ಸಾಯಿಲ್) ಅಭಿಯಾನದ ಫಲಕ ಹಿಡಿದು ಬೆಂಬಲ ಸೂಚಿಸಲಾಯಿತು. ಸಭಾಪತಿಗಳಾದ ಶ್ರೀಧರ್ ಕೆ., ಪ್ರೀತಾ ಹೆಗ್ಡೆ, ವಲಯ ಪ್ರತಿನಿಧಿ ಸಿಯಾಕ್, ಕ್ಲಬ್ ಪದಾಧಿಕಾರಿಗಳು ಸೇರಿದಂತೆ, ವಲಯ ಮಟ್ಟದ 8 ಕ್ಲಬ್ ಗಳ 40ಕ್ಕೂ ಅಧಿಕ ಮಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.