ಕಾರ್ಪಾಡಿ: ಶಾಸಕರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚನೆಗೆ ತೀರ್ಮಾನ

ಪುತ್ತೂರು: ಆರ್ಯಾಪು ಗ್ರಾಮದ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಭಕ್ತರ ಸಭೆ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನ. 12ರಂದು ಬೆಳಿಗ್ಗೆ ನಡೆಯಲಿದ್ದು, ಇದೇ ಸಂದರ್ಭ ಜೀರ್ಣೋದ್ಧಾರ ಸಮಿತಿ ರಚಿಸುವ ಬಗ್ಗೆ ತೀರ್ಮಾನಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಅಧ್ಯಕ್ಷತೆಯಲ್ಲಿ ಅ. 30ರಂದು ದೇವಳದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಶಾಸಕ ಸಂಜೀವ ಮಠಂದೂರು ಅವರನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಈಗಾಗಲೇ ಆರಿಸಲಾಗಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗುವವರ ಹೆಸರನ್ನು ಸಭೆಯಲ್ಲಿ ಸೂಚಿಸಿ ಅವರನ್ನು ಸಂಪರ್ಕಿಸಲು ತೀರ್ಮಾನಿಸಲಾಯಿತು. ದೇವಳಕ್ಕೆ ಭೂಮಿ ಖರೀದಿ ಪ್ರಕ್ರಿಯೆಗೆ ಹಣದ ಸಂಗ್ರಹಕ್ಕೆ ಊರವರು ಹೆಚ್ಚಿನ ಸಹಕಾರ ನೀಡುವಂತೆ, ಶೀಘ್ರವಾಗಿ ಭೂಮಿಯ ನೋಂದಾವಣೆ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ ಗೌಡ ಮರಿಕೆ, ವನಿತಾ ನಾಯಕ್ ಮರಿಕೆ, ಭಾರತಿ ಶಾಂತಪ್ಪ ಪೂಜಾರಿ, ಭೂಮಿ ಖರೀದಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಭಟ್ ಬಂಗಾರಡ್ಕ, ಕಾರ್ಯದರ್ಶಿಗಳಾದ ರಾಮ ಭಟ್ ಮಚ್ಚಿಮಲೆ, ರಂಗನಾಥ ಕಾರಂತ ಮರಿಕೆ, ಮಹಾಬಲ ರೈ ಒಳತ್ತಡ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೂರೇಲು ಸದಾನಂದ ಶೆಟ್ಟಿ, ಗ್ರಾಪಂ ಸದಸ್ಯರಾದ ಚೇತನ್ ಗೌಡ ದೇವಸ್ಯ, ಪವಿತ್ರಾ ರೈ ಉದ್ಯಂಗಳ, ಜಿ. ರುಕ್ಮಯ್ಯ ಮೂಲ್ಯ ಒಳತ್ತಡ್ಕ, ಹರೀಶ್ ನಾಯಕ್ ಬಳಕ್ಕ, ಬಾರಿಕೆ ಮಂಜಪ್ಪ ಶ್ರೀನಿವಾಸ ಶೆಟ್ಟಿ ಒಳತ್ತಡ್ಕ, ನಾರಾಯಣ ನಾಯ್ಕ್ ಗೆಣಸಿನಕುಮೇರ್, ಗಣೇಶ್ ರೈ ಮೊಡಪ್ಪಾಡಿ ಮೂಲೆ, ಕೃಷ್ಣ ನಾಯಕ್ ಮರಕ್ಕ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ ಅಧ್ಯಕ್ಷ ಬಾಲಚಂದ್ರ ಗೌಡ ದೇವಸ್ಯ, ಗ್ರಾಪಂ ಮಾಜಿ ಸದಸ್ಯ ಜಯಂತ ಶೆಟ್ಟಿ ಕಂಬಳತಡ್ಡ, ಗಣೇಶ ಗೌಡ ದೇವಸ್ಯ, ಗಿರೀಶ್ ಕಿನ್ನಿಜಾಲ್, ವಿಠಲ ರೈ ತೊಟ್ಲ, ಕೆವಿ ಬಾಲಕೃಷ್ಣ ಗೌಡ, ತೊಟ್ಲ ಜನಾರ್ದನ ರೈ, ದುಗ್ಗಪ್ಪ ಗೌಡ, ದನಂಜಯ ಶೆಟ್ಟಿ ಮೇರ್ಲ, ಪ್ರಜ್ವಲ್ ರೈ ತೊಟ್ಲ, ರಾಮಚಂದ್ರ ಕುಲಾಲ್ ಬಳಕ್ಕ, ಸುಮಾ ಭಟ್ ಕಾರ್ಪಾಡಿ, ಗೀತ ಗೋವಿಂದ ಭಟ್ ಕಾರ್ಪಾಡಿ, ಅನಂತಯ್ಯ ಕಾರಂತ ಕಾರ್ಪಾಡಿ, ಬಾಬು ನಾಯ್ಕ ಕಬ್ಬಿನಹಿತ್ಲು, ಗಿರೀಶ್ ಕಿನ್ನಿಜಾಲ್, ಪೂವಪ್ಪ ಕಲ್ಲರ್ಪೆ, ರೋಹಿತ್ ಬರಮೇಲ್, ಸುದರ್ಶನ ಭಟ್ ಕಾರ್ಪಾಡಿ, ಸುಪ್ರೀತ್ ರೈ ತೊಟ್ಲ, ವಿಶ್ವರೂಪ, ಸ್ವಾತಿ ಭಟ್ ಕಾವು, ಆಶಾಲತಾ, ಶ್ರೀಕ್ಷಾ ಜಿ. ರೈ, ಸಿಬ್ಬಂದಿ ಚಂದ್ರಕಲಾ ಜಗದೀಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನ. 10ರಿಂದ 48 ದಿನಗಳ ಮಂಡಲ ರಂಗಪೂಜೆ

ಪ್ರತಿವರ್ಷದಂತೆ ಈ ವರ್ಷವೂ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 48 ದಿನಗಳ ರಂಗಪೂಜೆ ನಡೆಯಲಿದೆ. ನ. 10ರಿಂದ ಡಿ. 27ರ ತನಕ 48 ದಿನಗಳ ಮಂಡಲ ರಂಗಪೂಜೆ ನಡೆಯಲಿದೆ. ರಂಗಪೂಜೆ ಸೇವೆಗೆ ರೂ. 1200 ಹಾಗೂ ಅನ್ನದಾನ ರೂ. 2500ಕ್ಕೆ ವಿಶೇಷ ರೀತಿಯಲ್ಲಿ ಸಹಕಾರ ನೀಡುವಂತೆ ಸಭೆಯಲ್ಲಿ ವಿನಂತಿಸಲಾಯಿತು.

ಡಿ. 27- 29ರತನಕ ಕಿರುಷಷ್ಠಿ ಜಾತ್ರೆ

ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಡಿ. 27, 28, 29ರಂದು ನಡೆಯಲಿದೆ. ಡಿ. 22ರಂದು ಗೊನೆಮುಹೂರ್ತ ನಡೆದು ದೇವಳದ ಮೂಲ ಸ್ಥಳ ಬಲ್ಲೇರಿಗೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಲಾಗುವುದು. ಜಾತ್ರೋತ್ಸವ ಸಿದ್ಧತೆಗಾಗಿ ಸಹಕಾರ ನೀಡುವಂತೆ ಸಭೆಯಲ್ಲಿ ಕೇಳಿಕೊಳ್ಳಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.