ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಐದು ತಂಡ ರಾಷ್ಟ್ರಮಟ್ಟದ ತ್ರೋಬಾಲ್,  ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ

ಉಪ್ಪಿನಂಗಡಿ : ವಿದ್ಯಾಭಾರತಿ ವತಿಯಿಂದ ಅ. 29 ಮತ್ತು 30 ರಂದು ಕಲ್ಬುರ್ಗಿಯ ಸೇಡಂನಲ್ಲಿ ನಡೆದ ಕ್ಷೇತ್ರಿಯ ಹಾಗೂ ಪ್ರಾಂತ ಮಟ್ಟದ ತ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಾಟದಲ್ಲಿ 14 ಮತ್ತು 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಐದು ತಂಡಗಳು ಎಲ್ಲಾ ಐದು ವಿಭಾಗಗಳಲ್ಲಿ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

 14 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 7ನೇ ತರಗತಿಯ ಕವೀಶ್ ಬಿ.ಕೆ, ಸಮೃದ್ಧ್ ರೈ, ಶ್ರೀಹಾನ್ ಎ. ಜೆ, ಇಮಾಮ್ ಅಹಮದ್, 6ನೇ ತರಗತಿಯ ಸಮೃದ್ಧ ಜೈನ್, ಶ್ರೇಯಸ್ಸ್, 8ನೇ ತರಗತಿಯ ಮೊಹಿತ್ ಡಿ. ಗೌಡ, ತನ್ವಿತ್.ಕೆ, ಜಿತೇಶ್. ಪಿ, ಅನೂಪ್ ಸಿಂಗ್, ನಿಹಾಲ್ ಎಚ್ ಶೆಟ್ಟಿ ಭಾಗವಹಿಸಿರುತ್ತಾರೆ.

14 ರ ವಯೋಮಾನದ ಬಾಲಕರ ವಾಲಿಬಾಲ್ ವಿಭಾಗದಲ್ಲಿ 8ನೇ ತರಗತಿಯ ಆಕಾಶ್, ಅಕ್ಷಜ್ ಶೆಟ್ಟಿ, ಅಹಮ್ಮದ್ ಶಬೀರ್, ಪುನಿತ್ ಕುಮಾರ್.ಬಿ, 7ನೇ ತರಗತಿಯ ಚಿಂತನ್ ಕೆ.ಸಿ, ಕೌಶಲ್ ಹಾಗೂ 6ನೇ ತರಗತಿಯ ಜಿತೇಶ್, ಆಯತ್ತುಲ್ಲಾ ಸಲೀಂ, ಯಶ್ವಿತ್ ಭಾಗವಹಿಸಿರುತ್ತಾರೆ.

17ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 10 ನೇ ತರಗತಿಯ ಐಮನ್ ಶಾಫಿ, ಅನೂಪ್ ಶೆಣೈ, ಭುವನ್ ಬೆದ್ರಾ, ಯಕ್ಷಿತ್, ರಚನ್ ಆರ್. ಕೆ, ಐಮನ್ ಕೆ. ಎ, ಮೊಹಮ್ಮದ್ ಅಬ್ದುಲ್ ಫತ್ಹಾ, ಎಂ.ಕೆ ಮಹಮ್ಮದ್ ಅಜ್ವದ್, ಶಮಿತ್ ಪ್ರಸಾದ್. ಪಿ, ನಿದೀಶ್ ಐ. ಬಿ, ಮೊಹಮ್ಮದ್ ಸಫ್ವಾನ್, ಅಲಿ ಅಫ್ತಾಬ್, 9ನೇ ತರಗತಿಯ ಮೊಹಮ್ಮದ ರೈಫ್ ಭಾಗವಹಿಸಿರುತ್ತಾರೆ.

14 ರ ವಯೋಮಾನದ ಬಾಲಕಿಯರ ತ್ರೋಬಾಲ್ ವಿಭಾಗದಲ್ಲಿ 7ನೇ ತರಗತಿಯ ಪೂರ್ವಿ ಬಿ.ಕೆ, ರಿದಾ ಮರಿಯಮ್, ಸವ್ಯ ಎಂ, ಅನ್ವಿ ಬಿ ಆಚಾರ್ಯ, ಪೂಜಾ ಹೆಚ್, ಎಂ, ರಿತಿಕಾ ಪೈ, ಸೃಷ್ಠಿ, ತನ್ವಿ, 6ನೇ ತರಗತಿಯ ಅನುಶ್ರೀ, 8ನೇ ತರಗತಿಯ ವನಿಷಾ, ಸೃಜನಾ ಸಿ. ಟಿ, ಹನಾನ್ ಹಾರೂನ್, 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ನಿಧಿ ಬಂಗೇರಾ, ಮೇಘನಾ, ತೇಜಸ್ವಿನಿ, ನಾಫಿಯ, ಸಾರಾ ನೀಮಾ, ಸಾತ್ವಿ ಬಿ.ಕೆ, ರಿಷಿಕಾ ಸಿ ಶೆಟ್ಟಿ, ಕ್ಷಿತಿ, ಮೈತ್ರಿ, 9ನೇ ತರಗತಿಯ ಅಮತ್ತೂನೂರ್ ಸಲೀಂ, ಹಂಸೀನಾ ಹಾರೂನ್, ಪ್ರಥಮ ಪಿ.ಯು.ಸಿ ಯ ಶಿವಾನಿ, ಹಂಸಿನಿ ಮತ್ತು ತೃಷಾ ಭಾಗವಹಿಸಿರುತ್ತಾರೆ.

ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ  ಶ್ರೀರಂಜಿನಿ ತರಬೇತಿ ನೀಡಿದ್ದಾರೆ. ಈ ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ  ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.