ಕುಂಬ್ರ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಹರೀಶ್ ರೈಗೆ ಬೀಳ್ಕೊಡುಗೆ

 

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕುಂಬ್ರ ಶಾಖಾ ವ್ಯವಸ್ಥಾಪಕರಾಗಿ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಪುತ್ತೂರು ಮುಖ್ಯ ಶಾಖೆಗೆ ವರ್ಗಾವಣೆಗೊಂಡಿರುವ ಹರೀಶ್ ರೈ ಪಿ.ರವರಿಗೆ ಬೀಳ್ಕೊಡುಗೆ ಸಮಾರಂಭವು ಕುಂಬ್ರ ಶಾಖಾ ಕಛೇರಿಯಲ್ಲಿ ಅ.29 ರಂದು ಜರಗಿತು. ಎಸ್‌ಸಿಡಿಸಿಸಿ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ನರಸಿಂಹ ಪೂಂಜ, ಕೆದಂಬಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ, ಕುಂಬ್ರ ಚಂದನ ವಾಣಿಜ್ಯ ಸಂಕೀರ್ಣದ ಮಾಲಕ ರಾಮ್‌ಮೋಹನ್ ಪಿ.ಎಸ್,ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ನೂತನ ಶಾಖಾ ವ್ಯವಸ್ಥಾಪಕ ವಿಶ್ವನಾಥ ನಾಯ್ಕ ಪಿರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಸನ್ಮಾನ

ಹರೀಶ್ ರೈ ಪಿ.ಯವರನ್ನು ಹಿರಿಯ ಗ್ರಾಹಕರು ಹಾಗೂ ಪ್ರಗತಿ ಪರ ಕೃಷಿಕರಾದ ಬಾಲಕೃಷ್ಣ ರೈ ಮುಗೇರು ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಹರೀಶ್ ರೈಯವರು ಮಾತನಾಡಿ, ಕಳೆದ 8 ವರ್ಷಗಳಿಂದ ಬ್ಯಾಂಕ್ ಉತ್ತಮ ವ್ಯವಹಾರ ನಡೆಸಲು ಸಹಕರಿಸಿದ ಎಲ್ಲಾ ಗ್ರಾಹಕ ಬಂಧುಗಳಿಗೆ ಹಾಗೂ ಸಹೋದ್ಯೋಗಿಗಳಿಗೆ ಅಭಿನಂದಿಸಿ ನೂತನ ವ್ಯವಸ್ಥಾಪಕರಿಗೆ ಎಲ್ಲರೂ ಸಹಕರಿಸುವಂತೆ ಕೇಳಿಕೊಂಡರು.

ಕುಂಬ್ರ ಶಾಖಾ ಸಿಬ್ಬಂದಿಗಳಾದ ಶುತಿ, ರೋಹಿತ್, ಅನಿಲ್ ರೈ, ನವೋದಯ ಸ್ವಸಹಾಯ ಸಂಘದ ಪ್ರೇರಕಿಯರಾದ ಹರಿಣಾಕ್ಷಿ, ಮಾಧವಿ, ಕಲ್ಪವಲ್ಲಿ, ಶೋಭಾ, ಪಿಗ್ಮಿ ಸಂಗ್ರಹಕಾರ ಧರ್ಣಪ್ಪ ಗೌಡ ಹಾಗೂ ಕವಿತಾ ಸಹಕರಿಸಿದ್ದರು. ಸಭೆಯಲ್ಲಿ ಸಹಕಾರಿ ಸಂಘಗಳ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಎಲ್‌ಐಸಿ ಮುಖ್ಯ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿ, ಶಾಖಾ ಸಿಬ್ಬಂದಿ ಕಿಶೋರ್ ಕುಮಾರ್ ಎಸ್.ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.