ಕುಂಡಡ್ಕ ಬೇರಿಕೆಯಲ್ಲಿ ರಕ್ತದಾನ ಶಿಬಿರ

ಸಮಾಜ ಮುಖ್ಯ ವಾಹಿನಿಗೆ ಬಂದಾಗ ಅಭಿವೃದ್ಧಿ ಸಾಧ್ಯ: ಡಾ. ರಾಜಾರಾಮ್.ಕೆ.ಬಿ.

ವಿಟ್ಲ: ಸಮಾಜ ಮುಖ್ಯ ವಾಹಿನಿಗೆ ಬಂದಾಗ ಆ ಸಮುದಾಯದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಪ್ಪಿನಂಗಡಿಯ ಖ್ಯಾತ ದಂತ ವೈದ್ಯರಾದ ಡಾ. ರಾಜಾರಾಮ್ ಕೆ.ಬಿ.ರವರು ಹೇಳಿದರು. ಅವರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮತ್ತು ಮಹಿಳಾ ಘಟಕ ಕುಂಡಡ್ಕ ಬೇರಿಕೆ ಇದರ ವತಿಯಿಂದ ಬಿಲ್ಲವ ಸಂಘ ವಿಟ್ಲ ಇದರ ಬೆಳ್ಳಿಹಬ್ಬದ ಸಂಭ್ರಮೋತ್ಸವದ ಪ್ರಯುಕ್ತ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದಲ್ಲಿ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ರಕ್ತದಾನ ಮಾಡುವುದರಲ್ಲಿ ಯಾವುದೇ ರೀತಿಯ ಭಯ ಪಡೆಯುವ ಅಗತ್ಯವಿಲ್ಲ ಮಾನಸಿಕವಾಗಿ ಹಾಗೂ ದೈಹಿಕವಾಗಿ ರಕ್ತದಾನ ಮಾಡುವುದು ಒಳ್ಳೆಯದು. ರಕ್ತದಲ್ಲಿ ಯಾವುದೇ ರೀತಿಯ ಜಾತಿ ಮತ ಪಂಥ ಧರ್ಮ ಭೇದ ಭಾವ ಇಲ್ಲ. ಎಲ್ಲರ ರಕ್ತವು ಕೆಂಪುಬಣ್ಣದಲ್ಲಿಯೇ ಇದೆ. ಆದರೆ ವರ್ಗದಲ್ಲಿ ಬೇರೆ ಬೇರೆ ರೀತಿಯಲ್ಲಿ ಇರಬಹುದು ಎಂದು ತಿಳಿಸಿದ ಅವರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಬೇರಿಕೆ ಇದರ ಕಾರ್ಯ ವೈಖರಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಲಡ್ ಬ್ಯಾಂಕ್ ಪ್ರವರ್ತಕ ರಾದ ಡಾ. ರಾಮಚಂದ್ರ ಭಟ್ ಮಾತನಾಡಿ ರಕ್ತದಾನ ಎಂಬುದು ಮಹಾಧನ ರಕ್ತದಾನ ಮಾಡಿದವರ ರಕ್ತವನ್ನು ವಿಭಜಿಸಿ ಗ್ರೂಪ್ ಮಾಡಿ ಬಂದಂತಹ ರೋಗಿಗಳಿಗೆ ಕೊಡುವಂತಹ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ನಿಮ್ಮಂತಹ ಸಂಘ ಸಂಸ್ಥೆಗಳು ಇಂತಹ ವ್ಯವಸ್ಥೆಯನ್ನು ಮಾಡಿದಾಗ ರಕ್ತದ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿ ರಕ್ತದಾನ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ವಿಟ್ಲ ಬಿಲ್ಲವ ಸಂಘ ಇದರ ಅಧ್ಯಕ್ಷರಾದ ಹರೀಶ್.ಪಿ.ಎಚ್., ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿಯ ಕಾರ್ಯದರ್ಶಿ ರಾಜೇಶ್ ವಿಟ್ಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಬೇರಿಕೆ ಇದರ ಅಧ್ಯಕ್ಷ ಹರೀಶ್ ಮಾರುವಾಳ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷರಾದ ದೇಜಪ್ಪ ಪೂಜಾರಿ ನಿಡ್ಯ, ಗೌರವಾಧ್ಯಕ್ಷೆ ಸುಮಾ ದೇಜಪ್ಪ ಪೂಜಾರಿ ನಿಡ್ಯ, ಮಹಿಳಾ ಅಧ್ಯಕ್ಷೆಯಾದ ಸುಮಲತಾ ಅಳಕೆಮಜಲು, ಕಟ್ಟಡ ಸಮಿತಿ ಉಪಾಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ, ಕಟ್ಟಡ ಸಮಿತಿ ಕಾರ್ಯದರ್ಶಿ ಮೋಹನ್ ಗುರ್ಜಿನಡ್ಕ, ಕೋಶಾಧಿಕಾರಿ ನಾರಾಯಣ ಪೂಜಾರಿ ಕಟ್ನಾಜೆ, ಕೃಷ್ಣಪ್ಪ ಪೂಜಾರಿ ಜೇಡರಕೋಡಿ, ಪತ್ರಕರ್ತ ವಿಷ್ಣುಗುಪ್ತ ಪುಣಚ, ಚೆನ್ನಪ್ಪ ಪೂಜಾರಿ ಪಾದೆ, ವೆಂಕಪ್ಪ ಪೂಜಾರಿ ಪಿಲಿಂಜ, ಲೋಹಿತ್, ಪಿಲಿಂಜ, ಕ್ರಷ್ಣಪ್ಪ ಪೂಜಾರಿ ಮರುವಾಳ, ಅಕ್ಷಯ್ ಮರುವಾಳ, ವಿನೋದ್ ಪಿಲಿಂಜ, ಸಂದೀಪ್ ಪಿಲಿಂಜ, ಪ್ರಜ್ವಲ್ ಪಿಲಿಂಜ, ಶಿವಪ್ರಸಾದ್ ಪಿಲಿಂಜ, ಚೇತನ್ ಕೆಮಾನಾಜೆ, ವಿಶ್ವನಾಥ ಕೆಮಾನಾಜೆ, ಕೇಶವ ಪಾಂಡೇಲು,‌ ಅಶೋಕ ಪಾಂಡೇಲು, ಸತೀಶ ಪಾಂಡೇಲು, ನವೀನ ಪಾಂಡೇಲು, ಶೃಜನ್ ಅಜ್ಜಿನಡ್ಕ, ಸತೀಶ ಪಲಿಂಜ, ಕೃಷ್ಣ ಗೌಡ ಪಿಲಿಂಜ, ರಾಮ್ಮಣ್ಣ ಪಿಲಿಂಜ, ತಾರನಾಥ ಪಿಲಿಂಜ, ಯಶವಂತ ಪಿಲಿಂಜ, ಚಂದ್ರಗೌಡ ಪಿಲಿಂಜ, ಜಗನ್ನಾಥ ಮೂಲ್ಯ ಬೇರಿಕೆ, ಆಕಾಶ್ ಬೇರಿಕೆ, ಕ್ರಷ್ಣಪ್ಪ ಪೂಜಾರಿ ಮೈರುಂಡ, ಚರಣ್ ಮರುವಾಳ, ಕಿರಣ್ ಮರುವಾಳ, ಯಾಶ್ವಸಿ ಕಟ್ನಾಜೆ, ವಿಶ್ವಾಸ್ ಕಟ್ನಾಜೆ, ಚೇತನ್ ಭಂಡಾರಮನೆ, ಹರೀತ್ ಮರುವಾಳ, ರಾಜೇಶ್, ಪಿಲಿಂಜರವರು ರಕ್ತದಾನ.ಮಾಡಿದರು. ಚ್ಯೆತ್ಯನ್ಯ, ಆಶಿಕಾ, ವಿಕ್ಷಣ್ಯ ಪ್ರಾರ್ಥಿಸಿದರು. ಹರೀಶ್ ನೀರಕೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಹರೀಶ್ ಮರುವಾಳ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.