ಕುಂಡಡ್ಕ ಬಿಲ್ಲವ ಸಂಘದ ಸಮುದಾಯ ಭವನದ ಉದ್ಘಾಟನೆ ಹಿನ್ನೆಲೆ – ಸಮಿತಿ ಸಭೆ

ವಿಟ್ಲ: ಕುಂಡಡ್ಕ ಬಿಲ್ಲವ ಸಂಘದ ಸಭೆಯು ಸಂಘದ ಅಧ್ಯಕ್ಷರಾದ ದೂಮಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದಲ್ಲಿ ನಡೆಯಿತು.


ಸಮುದಾಯ ಭವನದ ಉದ್ಘಾಟನೆಯನ್ನು 2023 ಪೆ. 5 ಕ್ಕೆ ಮಾಡುವುದೆಂದು ಈ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳನ್ನು ಮತ್ತು ಸಮಾಜದ ಗಣ್ಯರನ್ನು ಆಹ್ವಾನಿಸವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷರಾದ ನಾರಾಯಣ ಎಸ್.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ ಪೂಜಾರಿ, ಕಟ್ಟಡ ಸಮಿತಿಯ ಯತೀಶ ಬೇರಿಕೆ, ನಿಕಟಪೂರ್ವ ಅಧ್ಯಕ್ಷರಾದ ವಿಠಲ ಪೂಜಾರಿ , ವಿನೋದ್, ದೀಕ್ಷಿತ್ ಮಾಡತ್ತಡ್ಕ, ನಾರಾಯಣ ಪೂಜಾರಿ ಪಿಲಿಂಜ, ಲಿಂಗಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ, ನಾರಾಯಣ ಪಿ.ಸಿ , ಸಂಜೀವ ಪೂಜಾರಿ, ಹೊನ್ನಪ್ಪ ಪೂಜಾರಿ, ನಾರಾಯಣ ಎಸ್.ದೂಮಪ್ಪ ಪೂಜಾರಿ ಕೇದಗೆದಡಿ, ಚೇತನ್ ಮರುವಾಳ ಮೊದಲಾದವರು ಉಪಸ್ಥಿತರಿದ್ದರು .

ಕೆ.ಟಿ.ಆನಂದರವರು ಕಾರ್ಯಕ್ರಮ ನಿರೂಪಿಸಿದರು. ಸುಂದರ ಪೂಜಾರಿ ಸ್ವಾಗತಿಸಿ , ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.