“ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಸಮಾಜದಿಂದ ದೂರವಿಡಿ” : ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿಯಿಂದ ಆಂದೋಲನ

ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಿರಂತರ ಆಂದೋಲನ ನಡೆಯುತ್ತಿದೆ.”ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ” ಘೋಷಣೆಯೊಂದಿಗೆ ನಡೆಯುತ್ತಿರುವ ಈ ಆಂದೋಲನಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದೆ.ಲಂಚ ರಹಿತವಾಗಿ ಉತ್ತಮ ಸೇವೆ ನೀಡುತ್ತಿರುವ ಹಲವು ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಸುದ್ದಿ ಜನಾಂದೋಲನ ವೇದಿಕೆ ಮೂಲಕ ಜನರು ಆಯ್ಕೆ ಮಾಡಿ ಗುರುತಿಸಿ ಅಭಿನಂದಿಸಿದ್ದಾರೆ.ಭ್ರಷ್ಟರನ್ನು ಸಮಾಜದಿಂದ ಬಹಿಷ್ಕರಿಸಬೇಕು ಎಂಬ ಆಗ್ರಹವೂ, ಸುದ್ದಿ ಜನಾಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಹಲವರಿಂದ ವ್ಯಕ್ತವಾಗಿತ್ತು.ಇದೀಗ ಪ್ರಧಾನಿ ನರೇಂದ್ರ ಮೋದಿಯವರೇ, ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಸಮಾಜದಿಂದ ಬಹಿಷ್ಕರಿಸಬೇಕು, ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಬೆಂಗಳೂರು: ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಸಮಾಜದಿಂದ ದೂರವಿಡಿ.ಅವರನ್ನು ಶಿಕ್ಷೆಯಿಂದ ಪಾರಾಗಲು ಬಿಡಬೇಡಿ.ಅವರಿಗೆ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ದೊರೆಯದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಹೇಳಿದ್ದಾರೆ.
ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಗುರುವಾರ ಆಯೋಜಿಸಿದ್ದ “ಜಾಗೃತಿ ಅರಿವು ಸಪ್ತಾಹ” ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ತಡೆ ಘಟಕಗಳ ಅಧಿಕಾರಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, “ಸಮಾಜದಲ್ಲಿ ಭ್ರಷ್ಟರನ್ನು ವೈಭವೀಕರಿಸಲಾಗುತ್ತಿದೆ.ಪ್ರಶಸ್ತಿ, ಪುರಸ್ಕಾರಗಳಿಗೆ ಅವರ ಹೆಸರನ್ನು ಸೂಚಿಸಲಾಗುತ್ತಿದೆ. ತಮ್ಮನ್ನು ತಾವು ಪ್ರಾಮಾಣಿಕರೆಂದು ಕರೆದುಕೊಳ್ಳುವ ವ್ಯಕ್ತಿಗಳು ಕಿಂಚಿತ್ತೂ ನಾಚಿಕೆಯಿಲ್ಲದೆ ಭ್ರಷ್ಟರೊಂದಿಗೆ ಫೊಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.ಇದು ನಮ್ಮ ಸಮಾಜಕ್ಕೆ ಶೋಭೆ ಕೊಡುವುದಿಲ್ಲ” ಎಂದಿದ್ದಾರೆ.
“ಭ್ರಷ್ಟಾಚಾರ ನಿಯಂತ್ರಣ ವಿಚಾರದಲ್ಲಿ ಎಲ್ಲಾ ಇಲಾಖೆಗಳೂ ಸರ್ಕಾರದ ಕ್ರಮದಲ್ಲಿಯೇ ಇರಬೇಕು.ಈ ಪಿಡುಗನ್ನು ತೊಡೆದು ಹಾಕಲು ಎಲ್ಲರೂ ಸಂಕಲ್ಪ ಮಾಡಬೇಕು.ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರ ರಹಿತವಾದ ಆಡಳಿತ ವ್ಯವಸ್ಥೆ ರೂಪಿಸಲು ನಾವೆಲ್ಲಾ ಪ್ರಯತ್ನಿಸಬೇಕು” ಎಂದು ಮೋದಿ ಕರೆ ನೀಡಿದ್ದಾರೆ.”ಪ್ರಧಾನಿಯಾಗಿ ನಾನು ಹಲವು ಟೀಕೆ ಹಾಗೂ ನಿಂದನೆಗಳನ್ನು ಎದುರಿಸಿದ್ದೇನೆ.ನೀವು ಪ್ರಾಮಾಣಿಕರಾಗಿದ್ದರೆ, ಆ ಹಾದಿಯಲ್ಲಿ ಸಾಗುತ್ತಿದ್ದರೆ ಜನರು ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ.ಮೂಲ ಸೌಕರ್ಯಗಳ ಅಭಾವ ಹಾಗೂ ಸರ್ಕಾರದ ಒತ್ತಡವು ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ.ಈ ವ್ಯವಸ್ಥೆಯನ್ನು ನಾವು ಬದಲಿಸುತ್ತೇವೆ.ಬೇಡಿಕೆ ಹಾಗೂ ಪೂರೈಕೆಯ ನಡುವಣ ಅಂತರ ತಗ್ಗಿಸುತ್ತೇವೆ”  ಎಂದು ಮೋದಿ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.