ವಿ.ಎ., ಆರ್.ಐ ಕಚೇರಿ ನಿರ್ಲಕ್ಷ್ಯಆರೋಪ ಕಲಿಯುಗ ಸೇವಾ ಸಮಿತಿಯಿಂದ ದೂರು

ಪುತ್ತೂರು : ಚಿಕ್ಕಮುಡ್ನೂರು ಗ್ರಾಮಕರಣಿಕರ ಕಛೇರಿ ಮತ್ತು ಕಂದಾಯ ನಿರೀಕ್ಷಕರ ಕಛೇರಿಗಳು ರಸ್ತೆ ಅತಿಕ್ರಮಣದ ಬಗ್ಗೆ ನೀಡಿದ ದೂರಿಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಪುತ್ತೂರು ಸಹಾಯಕ ಆಯುಕ್ತರು ಮತ್ತು ಶಾಸಕರಿಗೆ ದೂರು ನೀಡಲಾಗಿದೆ.

ರಾಗಿದಕುಮೇರು ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಬದಿ ಅತಿಕ್ರಮಣಗಳ ಬಗ್ಗೆ ದೂರು ನೀಡಿ ವರ್ಷಗಳೇ ಕಳೆದಿದೆ. ಹಲವು ಬಾರಿ ಈ ಬಗ್ಗೆ ಈ ಕಚೇರಿಗಳನ್ನು ಸಂಪರ್ಕಿಸಲಾಗಿದೆ. ಅತಿಕ್ರಮಣಕಾರರಿಗೆ ಬೆಂಬಲ ನೀಡುವ ರೀತಿ ವರ್ತಿಸುತ್ತಿದೆ. ಪ್ಲಾಟಿಂಗ್ ಕಡತಗಳಿಗೆ ಸಂಬಂಧಪಟ್ಟ ಅನೇಕ ಅರ್ಜಿಗಳು ಈ ಕಚೇರಿಯಲ್ಲಿ ರಾಶಿ ಬಿದ್ದಿದೆ. ವಿಲೇವಾರಿ ಬಗ್ಗೆ ಗಮನಹರಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.