ವರ್ಗಾವಣೆಗೊಂಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕುಂಬ್ರ ಶಾಖಾ ವ್ಯವಸ್ಥಾಪಕ ಹರೀಶ್ ರೈ ಪಿ.ರವರಿಗೆ ಬೀಳ್ಕೊಡುಗೆ

ಪುತ್ತೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕುಂಬ್ರ ಶಾಖಾ ವ್ಯವಸ್ಥಾಪಕ ಹರೀಶ್ ರೈ ಪಿ.ರವರು ಪುತ್ತೂರು ಮುಖ್ಯ ಶಾಖೆಗೆ ವರ್ಗಾವಣೆಗೊಂಡಿದ್ದು ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಕುಂಬ್ರ ಶಾಖಾ ಕಛೇರಿಯಲ್ಲಿ ನಡೆಯಿತು.

ಕೇಂದ್ರ ಸಹಕಾರಿ ಬ್ಯಾಂಕ್‌ನ ನಿವೃತ್ತ ಶಾಖಾ ವ್ಯವಸ್ಥಾಪಕ ನರಸಿಂಹ ಪೂಂಜ, ಕೆದಂಬಾಡಿ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ, ಕುಂಬ್ರ ಚಂದನ ವಾಣಿಜ್ಯ ಸಂಕೀರ್ಣದ ಮಾಲಕ ರಾಮ್ ಮೋಹನ ಪಿ.ಎಸ್., ಕುಂಬ್ರ ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್., ನೂತನ ಶಾಖಾ ವ್ಯವಸ್ಥಾಪಕ ವಿಶ್ವನಾಥ ನಾಯ್ಕ ಪಿ.ರವರು ಶುಭಹಾರೈಸಿದರು.

ಸನ್ಮಾನ: ಹಿರಿಯ ಗ್ರಾಹಕ ಹಾಗೂ ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಮಂಗಳೂರುರವರು ಹರೀಶ್ ರೈ ಪಿ.ರವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಹರೀಶ್ ರೈ ಪಿ.ರವರು ಸಹಕರಿಸಿದ ಸಹೋದ್ಯೋಗಿಗಳನ್ನು, ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.

ಕುಂಬ್ರ ಶಾಖಾ ಸಿಬಂದಿಗಳಾದ ಶ್ರುತಿ, ರೋಹಿತ್, ಅನಿಲ್ ರೈ, ನವೋದಯ ಸ್ವಸಹಾಯ ಸಂಘದ ಪ್ರೇರಕಿಯರಾದ ಹರಿಣಾಕ್ಷಿ, ಮಾಧವಿ, ಕಲ್ಪವಲ್ಲಿ, ಶೋಭಾ, ಪಿಗ್ಮಿ ಸಂಗ್ರಾಹಕ ಧರ್ಣಪ್ಪ ಗೌಡ ಹಾಗೂ ಕವಿತಾ ಸಹಕರಿಸಿದರು. ಸಿಬಂದಿಗಳ, ಗ್ರಾಹಕರು ಉಪಸ್ಥಿತರಿದ್ದರು. ಎಲ್‌ಐಸಿ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿ ಕುಂಬ್ರ ಶಾಖಾ ಸಿಬಂದಿ ಕಿಶೋರ್ ಕುಮಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.