ಇಚ್ಲಂಪಾಡಿ ಕಾಂಗ್ರೆಸ್ ಬೂತ್ ಸಮಿತಿ; ಅಧ್ಯಕ್ಷ: ಹರೀಶ್ ಗೌಡ, ಕಾರ್ಯದರ್ಶಿ: ಸತೀಶ್

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ 1ನೇ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕೈಪನಡ್ಕ ರೋಯಿ ಜಾರ್ಜ್‌ರವರ ಮನೆಯಲ್ಲಿ ನಡೆಯಿತು.


ಕೌಕ್ರಾಡಿ ವಲಯ ಉಸ್ತುವಾರಿ ಕೆ.ಪಿ.ತೋಮಸ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಬೂತ್ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹರೀಶ್ ಗೌಡ ಅಲೆಕ್ಕಿ, ಕಾರ್ಯದರ್ಶಿಯಾಗಿ ಸತೀಶ್ ಪಳಿಕೆ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ರೋಯಿ ಟಿ.ಕೆ, ರಾಜಪ್ಪ ಮೂಡೆಜಾಲು, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಕುಂಙಿಮಾರ್, ಜತೆ ಕಾರ್ಯದರ್ಶಿಯಾಗಿ ಉಮೇಶ್ ಕೆ.ಆರ್ ಹಾಗೂ ಖಜಾಂಜಿಯಾಗಿ ವರ್ಗೀಶ್ ಅಬ್ರಹಾಂ ಅವರನ್ನು ಆಯ್ಕೆ ಮಾಡಲಾಯಿತು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್‌ನ ಹಿಂದುಳಿದ ವರ್ಗಗಳ ಸಮಿತಿ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಬೂತ್ ಸಮಿತಿ ನಿಕಟಪೂರ್ವ ಅಧ್ಯಕ್ಷ ಪಿ.ಜೆ.ಆಂಟನಿ, ಕಾರ್ಯದರ್ಶಿ ಜೋಬಿ, ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. ಉದಯ ಕುಮಾರ್ ಹೊಸಮನೆ ಸ್ವಾಗತಿಸಿ, ಗಿರೀಶ್ ಸಾಲ್ಯಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.