ನ.5: ಪೆರ್ನೆಯಲ್ಲಿ‌ ಉಪ್ಪಿನಂಗಡಿ ಯುವವಾಹಿನಿ ಘಟಕದ ಬೆಳ್ಳಿ ಬೆಳಕಿನ ಚಿತ್ತಾರ

ಪುತ್ತೂರು: ಯುವವಾಹಿನಿ ಉಪ್ಪಿನಂಗಡಿ ಘಟಕದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಬೆಳ್ಳಿ ಬೆಳಕಿನ ಚಿತ್ತಾರ, ತುಳಸಿ ಹಬ್ಬದ ಆಚರಣೆ ಮತ್ತು ಬಿರುವೆರ್ ಪೆರ್ನೆ ಬಿಳಿಯೂರು ಸಂಘಟನೆಯ ಉದ್ಘಾಟನೆ ನ.5ರಂದು ಸಂಜೆ 6 ಗಂಟೆಗೆ ಪೆರ್ನೆ ಮೇಗಿನಪುರಿಯ ರವೀಂದ್ರ ಪೂಜಾರಿಯವರ ಸಮೃದ್ಧಿ ನಿಲಯದಲ್ಲಿ ನಡೆಯಲಿದೆ‌. ಯುವವಾಹಿನಿ ಘಟಕದ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಹತ್ತುಕಲಸೆರವರು ಅಧ್ಯಕ್ಷತೆ ವಹಿಸಲಿದ್ದು ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.‌ಕಾರ್ಯಕ್ರಮ‌ ಉದ್ಘಾಟಿಸಲಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿರುವ ನ್ಯಾಯವಾದಿ ಪದ್ಮರಾಜ್ ಆರ್.‌ ಬಿರುವೆರ್ ಪೆರ್ನೆ ಬಿಳಿಯೂರು ಸಂಘಟನೆಯನ್ನು ಉದ್ಘಾಟಿಸಲಿದ್ದಾರೆ ಎಂದು‌ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.