ಕಡಬ ಹಳೇಸ್ಟೇಷನ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

0

ಕಡಬ: ಪೇಟೆಯ ಸಮೀಪ ಹಳೆಸ್ಟೇಷನ್ ಸಮೀಪ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಅಪಾಯದಿಂದ ಪಾರಾದ ಘಟನೆ ನ.4ರ ರಾತ್ರಿ ನಡೆದಿದೆ.


ಕಡಬದ ಹಳೆಸ್ಟೇಷನ್ ಎಂಬಲ್ಲಿ ರಸ್ತೆ ಬದಿಯ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ವಿದ್ಯುತ್ ಕಂಬ ಛಿದ್ರಗೊಂಡು ಮುರಿದು ಬಿದ್ದು ವಿದ್ಯುತ್ ತಂತಿಗಳು ಕಾರಿನ ಮೇಲೆ ಇರುವುದು ಅಪಘಾತದ ತೀವ್ರತೆಯನ್ನು ತೊರಿಸುವಂತಿದೆ. ಕಾರು ಕಡಬದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕಾರು ಸುಬ್ರಹ್ಮಣ್ಯ ಮೂಲದ್ದು ಎಂದು ತಿಳಿದು ಬಂದಿದೆ.

ವಿದ್ಯುತ್ ಕಂಬ ಮುರಿದು ಬಿದ್ದ ಹಿನ್ನೆಲೆಯಲ್ಲಿ ಆ ಭಾಗಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

LEAVE A REPLY

Please enter your comment!
Please enter your name here