ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 7 ನೇ ಶಾಖೆಯ ಉದ್ಘಾಟನೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ 7 ನೇ ಶಾಖೆಯ ಉದ್ಘಾಟನೆ ನ.7ರಂದು ನಡೆಯಿತು.

ಸಂಸ್ಕಾರ, ಸಂಘಟನೆ, ಸೇವೆ ಎನ್ನುವ ಧ್ಯೇಯದಿಂದ ದೇಶಾದ್ಯಂತ 42 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಎಸ್‌ಪಿವೈಎಸ್ಎಸ್ (SPYSS) ನ ಉಚಿತ 48 ದಿನಗಳ ಯೋಗ ತರಬೇತಿ ಶಿಬಿರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ, ಮುಳಿಯ ಗ್ರೂಪ್ ನ ಚೇರ್ ಮ್ಯಾನ್ ಹಾಗೂ ಅಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಕೇಶವ ಪ್ರಸಾದ ಮುಳಿಯರವರು ಅಷ್ಟಾಂಗ ಯೋಗವನ್ನು ಶಿವನ ಸಾನಿಧ್ಯದಲ್ಲಿ ಮಾಡುವುದರಿಂದ ಎಲ್ಲರೂ ಇದರ ಪ್ರಯೋಜನವನ್ನು ಪಡೆದು ಎಸ್‌ಪಿವೈಎಸ್ಎಸ್ ಸಮಿತಿಯಿಂದ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಜಯರಾಮಣ್ಣ ಹಾಗೂ ಅಧ್ಯಕ್ಷ ಪಾಂಗಳಾಯಿ ಶಾಖೆಯ ಯೋಗಬಂಧು ಉದ್ಯಮಿ ಶಿವಪ್ರಸಾದ್ ಉಪಸ್ಥಿತರಿದ್ದರು .

ಮುಖ್ಯ ಶಿಕ್ಷಕರಾದ ಆಶಲತಾ ಹಾಗೂ ಯೋಗ ಬಂಧುಗಳಾದ ಡಾ. ಪುಷ್ಪರಾಜ್ ಶೆಟ್ಟಿ, ಸರೋಜಿನಿ ಪಾಂಗಳಾಯಿ, ಶ್ವೇತ, ಸುಪ್ರೀತ ಕಾರ್ಯಕ್ರಮ ನಿರೂಪಿಸಿದರು.

ಪಾಂಗಳಾಯಿ ಶಿಕ್ಷಕರಾದ ರಶ್ಮಿ ಹಾಗು ಗಂಗಾದರ್ ಮತ್ತು ಪುತ್ತೂರು ಪಾಂಗಳಾಯಿ ಶಾಖೆಯ ಯೋಗ ಬಂಧುಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.