ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ ಭಜನೆ, ಗುರುಸ್ಮರಣೆಯ 15ನೇ ಕಾರ್ಯಕ್ರಮ

 

ಪುತ್ತೂರು: ಯುವವಾಹಿನಿ ಉಪ್ಪಿನಂಗಡಿ ಘಟಕ 25 ಸಂವತ್ಸರಗಳನ್ನು ಪೊರೈಸಿದ ಸವಿ ನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರ ಮನೆ ಭೇಟಿ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಭಜನೆ ಮತ್ತು ಗುರುಸ್ಮರಣೆಯ 15ನೇ ಕಾರ್ಯಕ್ರಮ ಯುವವಾಹಿನಿ ಉಪ್ಪಿನಂಗಡಿ ಘಟಕವನ್ನು 2017-2018ರ ಅವಧಿಯಲ್ಲಿ ಅಧ್ಯಕ್ಷರಾಗಿ ಮುನ್ನಡೆಸಿದ್ದ ಅಶೋಕ್ ಕುಮಾರ್ ಪಡ್ಪುರವರ ‘ಸಾನಿಧ್ಯ’ ಮನೆಯಲ್ಲಿ ನಡೆಯಿತು.

ಭಜನಾ ಕಾರ್ಯಕ್ರಮದ ನಂತರ ಗುರು ಸ್ಮರಣೆ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಘಟಕದ ಮಾಜಿ ಅಧ್ಯಕ್ಷ ಡಾ. ರಾಜರಾಮ್ ಕೆ.ಬಿ ನಡೆಸಿಕೊಟ್ಟರು. ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ಅಶೋಕ್ ಕುಮಾರ್ ಪಡ್ಪು ಮತ್ತು ಸೌಮ್ಯ ಅಶೋಕ್ ಕುಮಾರ್ ದಂಪತಿಯನ್ನು ಅಶೋಕ್ ಅವರ ತಾಯಿ ಗಿರಿಜಾ ಮತ್ತು ಮಗಳು ಸಾನಿಧ್ಯರವರೊಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅಶೋಕ್ ಕುಮಾರ್ ಪಡ್ಪುರವರು ಯುವವಾಹಿನಿಯ ಜೊತೆಗಿನ ಒಡನಾಟ ತಮ್ಮ ಜೀವನದಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದರ ಜೊತೆಗೆ ಕೇಂದ್ರ ಸಮಿತಿಯಲ್ಲಿ ಕೆಲಸ ಮಾಡುವ ಅವಕಾಶ ಒದಗಿಸಿತು ಎಂದು ಹೇಳಿದರು. ತಮ್ಮ ಅಧ್ಯಕ್ಷಾವಧಿಯಲ್ಲಿ ಘಟಕವನ್ನು ಅತ್ಯುತ್ತಮ ಮಟ್ಟದಲ್ಲಿ ನಡೆಸಲು ಸಹಕರಿಸಿದ ಸರ್ವರ ಸಹಕಾರವನ್ನು ಅವರು ಸ್ಮರಿಸಿದರು.

ಘಟಕದ ಗೌರವ ಸಲಹೆಗಾರರಾದ ವರದರಾಜ್ ಎಂ, ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ, ಸಮಾಜದ ಮುಖಂಡರಾದ ದೇವಪ್ಪ ಪಡ್ಪು, ಮಾಜಿ ಅಧ್ಯಕ್ಷರಾದ ಗುಣಕರ್ ಅಗ್ನಾಡಿ, ಅಜಿತ್ ಕುಮಾರ್ ಪಾಲೇರಿ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ್ ಸನಿಲ್, ಆಶಿತ್ ಎಂ..ವಿ, ನವೀನ್ ಪಡ್ಪು, ಡೀಕಯ್ಯ ಗೌಂಡತ್ತಿಗೆ, ಲೋಕೇಶ್ ಬೆತ್ತೋಡಿ, ಸುಂದರ ಪೂಜಾರಿ ಎಲಿಯ, ಹರೀಶ್ ಕುಮಾರ್ ಪಾಲೆತ್ತಡಿ, ಹಿರಿಯರಾದ ಬೊಮ್ಮಯ್ಯ ಬಂಗೇರ, ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ, ಜೊತೆ ಕಾರ್ಯದರ್ಶಿ ಅನಿತಾ ಸತೀಶ್, ಘಟಕದ ಉಪಾಧ್ಯಕ್ಷರಾದ ಮನೋಹರ್ ಆಟಲ್, ಮನೋಜ್ ಸಾಲಿಯಾನ್, ಪದಾಧಿಕಾರಿಗಳಾದ ನಾಣ್ಯಪ್ಪ ಕೋಟ್ಯಾನ್, ಉಮೇಶ್, ಮನೋಹರ್ ಕೆಳಗಿನಮನೆ, ಮಾಧವ ಪೂಜಾರಿ, ರಕ್ಷಾ ಎಚ್.ಎಸ್, ಬೆಳ್ಳಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವಸಂತ್ ಪೂಜಾರಿ ಕುಂಡಾಪು, ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಕಜೆ, ಬಜತ್ತೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಸೋಮಸುಂದರ್, ಉಪ್ಪಿನಂಗಡಿ ಘಟಕದ ಸದಸ್ಯರಾದ ರಮ್ಯಾ ರಾಜರಾಮ್, ಚಂದ್ರಶೇಖರ್ ಕಾರೆದಕೋಡಿ, ಲಕ್ಷ್ಮೀಶ ನಿಡ್ಡೆಂಕಿ, ಗಂಗಾಧರ್ ಪುರಿಯ, ಲೋಕೇಶ್ ಬೆತ್ತೋಡಿ, ರಕ್ಷಿತ್ ಪೂಜಾರಿ, ರಾಕೇಶ್ ಪೂಜಾರಿ, ವಿಕ್ರಮ್ ಪೂಜಾರಿ, ಕು. ವರ್ಷ, ಮೇಷಾ, ಹರ್ಷಿತಾ, ನಿಶ್ಮಿತಾ, ಆಕೃತಿ, ಧೃಣಿತಾ, ಅನುಜ್ಞಾ, ಅಭಿಜ್ಞಾ, ಸಾನಿಧ್ಯ, ಧ್ರುವ, ಅಕ್ಷಯ್, ಸಂತೋಷ್ ಕೆಳಗಿನಮನೆ ಮುಂತಾದವರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅನಿತಾ ಸತೀಶ್ ವಂದಿಸಿದರು. ಮಾಜಿ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.