ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ

ಬೇರೆಯವರ ಅನುಕರಣೆ ಸಲ್ಲ, ತಮ್ಮತನವನ್ನು ತೋರ್ಪಡಿಸಬೇಕು-ಹರೀಶ್ ಶಾಸ್ತ್ರೀ

ಉಪ್ಪಿನಂಗಡಿ: ನಾವುಗಳು ಯಾವುದೇ ವಿಷಯವನ್ನು ಆಯ್ಕೆ ಮಾಡುವಾಗ ಬೇರೆಯವರ ಅನುಕರಣೆ ಸಲ್ಲ, ತಮ್ಮತನವನ್ನು ತೋರ್ಪಡಿಸಬೇಕು ಎಂದು ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಹರೀಶ್ ಶಾಸ್ತ್ರೀ ಹೇಳಿದರು.

ಅವರು ನ. 6ರಂದು ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಪ್ರತಿಯೋರ್ವರಲ್ಲೂ ವಿಶಿಷ್ಠವಾದ ಪ್ರತಿಭೆಯ ದೀಪಗಳಿವೆ. ನಮ್ಮಲ್ಲಿರುವ ದೀಪ ಇನ್ನೊಬ್ಬರಿಗಾಗಿ ಉರಿಯಬೇಕು ಎಂದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಬಹಷ್ಟು ಅವಕಾಶಗಳಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳಬೇಕು ಎಂದರು. ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ‍್ಯದರ್ಶಿ ಯು.ಜಿ. ರಾಧಾ, ಇಂದ್ರಪ್ರಸ್ಥ ವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್, ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ತನ್ವಿತ್, ಕಾರ‍್ಯದರ್ಶಿ ಪ್ರಥಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ. ಪ್ರಕಾಶ್ ಸ್ವಾಗತಿಸಿ, ವಂದಿಸಿದರು. ಶಿಕ್ಷಿಕಿಯರಾದ ಜಯಂತಿ, ಸುಂದರಿ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.