ಬಂಟರ ಗ್ರಾಮ ಸಮಿತಿ ಕುರಿಯದಿಂದ ಗೃಹೋಪಯೋಗಿ ಪರಿಕರಗಳ ಕೊಡುಗೆ

ಪುತ್ತೂರು: ಕುರಿಯ ಗ್ರಾಮದ ಮಾಲಾರು ನಿವಾಸಿ ಪದ್ಮಾವತಿ ಯವರಿಗೆ ವರ್ಲ್ಡ್ ಬಂಟ್ಸ್ ಟ್ರಸ್ಟ್ ನವರು ಕೊಡಮಾಡಿದ ಹೊಸಮನೆಯ ಹಸ್ತಾಂತರ ಸಂದರ್ಭದಲ್ಲಿ ಬಂಟರ ಗ್ರಾಮ ಸಮಿತಿ ಕುರಿಯ ಇದರ ವತಿಯಿಂದ ದೈನಂದಿನ ಉಪಯೋಗಕ್ಕೆ ಬೇಕಾದ ಸ್ಟೈನ್ಲೆಸ್ ಸ್ಟೀಲಿನ ಪಾತ್ರೆ ಪಗಡಿ, ಮಿಕ್ಸಿ, ಕುಕ್ಕರ್ ಗಳನ್ನು ನೀಡಲಾಯಿತು.

ಬಂಟರ ಗ್ರಾಮ ಸಮಿತಿ ಕುರಿಯ ಇದರ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳ ಮಜಲುಗುತ್ತು ಹಾಗೂ ಕಾರ್ಯದರ್ಶಿ ನವೀನ ಕುಮಾರ್ ರೈ ಬಳ್ಳಮಜಲುರವರು ಪದ್ಮಾವತಿಯವರಿಗೆ ಗೃಹೋಪಯೋಗಿ ಪರಿಕರಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಂಟರ ಕುರಿಯ ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು, ವರ್ಲ್ಡ್ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ಸವಣೂರು ಕೆ.ಸೀತಾರಾಮ ರೈ, ಬಂಟರ ಸಂಘದ ಪುತ್ತೂರು ನಗರ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಜೈರಾಜ್ ಭಂಡಾರಿ ನೊಣಾಲು, ಅರಿಯಡ್ಕ ಚಿಕ್ಕಪ್ಪ ನಾಯಕ್, ಗಣೇಶ್ ರೈ ಬೂಡಿಯಾರ್, ಅಮ್ಮಣ್ಣ ರೈ ಪಾಪೆಮಜಲು, ಭರತ್ ರೈ ಪಾಲ್ತಾಡಿ, ಮೋಹನ್ ರೈ ನರಿಮೊಗರು, ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿರವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.