34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ  ವಿಶೇಷ ಗ್ರಾಮ ಸಭೆ

ಮಹಿಳಾ ಉದ್ಯೋಗ ಸಬಲೀಕರಣ ಗ್ರಾಮ ಸಭೆ

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಉದ್ಯೊಗ ಸಬಲೀಕರಣ ಅಭಿಯಾನದಡಿ ಮಹಿಳಾ ಗ್ರಾಮ ಸಭೆ ನ. 7ರಂದು ಜರಗಿತು.

34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಉದ್ಯೋಗ ಸಬಲೀಕರಣದ ಬಗ್ಗೆ ಭರತ್‌ರಾಜ್ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಹರಿಪ್ರಸಾದ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ನಿರ್ವಹಿಸಿದರು. ಇಂಜಿನಿಯರ್ ಲಕ್ಷ್ಮೀ ಪೂರಕ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವೇದಾವತಿ, ಗ್ರಾಮಸ್ಥರಾದ ಅಬ್ದುಲ್ ರಹಿಮಾನ್ ಯುನಿಕ್, ಅಸ್ಕರ್ ಆಲಿ, ಇಸ್ಮಾಯಿಲ್ ಮೇದರಬೆಟ್ಟು, ಸುಬ್ರಹ್ಮಣ್ಯ ಶೇಟ್, ಅನಿ ಮಿನೇಜಸ್, ಖಲಂದರ್, ಶಿಕ್ಷಕಿ ಬಬಿತಾ ಮೆನೇಜಸ್, ತನಿಯಪ್ಪ, ಅಂಗನವಾಡಿ ಕಾರ‍್ಯಕರ್ತೆ ಜಾನಕಿ ಸಲಹೆ ಸೂಚನೆ ನೀಡಿದರು.

4 ಮಂದಿಗೆ ಮನೆ ಮಂಜೂರಾತಿ ಪತ್ರ ವಿತರಣೆ:

ಸಭೆಯಲ್ಲಿ ವಸತಿ ಇಲಾಖೆಯಿಂದ ಕೊಡ ಮಾಡಿದ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರವನ್ನು ಫಲಾನುಭವಿಗಳಾದ ಅತೀಕ್ಷಾ ಎಸ್. ಶೆಟ್ಟಿ, ಪ್ರಸನ್ನ ಕುಮಾರಿ, ಕುಸುಮಾವತಿ, ಮಲ್ಲಿಕಾ ರವರಿಗೆ ವಿತರಿಸಲಾಯಿತು.

ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಸ್ವಾಗತಿಸಿ, ಲೆಕ್ಕ ಸಹಾಯಕ ದೇವಪ್ಪ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.