ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಕನ್ಯಾನ ಭಾರತ್ ಸೇವಾಶ್ರಮದಲ್ಲಿ ಸ್ವಚ್ಛತಾ ಕಾರ್ಯಕ್ರಮ, ದೇಣಿಗೆ ಸಮರ್ಪಣೆ

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು, ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸೇವಾ ಸಂಘ ವಿಟ್ಲ, ಸರಸ್ವತಿ ಮಹಿಳಾ ಮಂಡಳಿ, ಸಾರಸ್ವತ ಯುವ ಮತ್ತು ವಿದ್ಯಾರ್ಥಿ ಸಂಘ ಪುತ್ತೂರು ಹಾಗೂ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಆಜೇರು ಪುಣಚ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಸಂಘದ ಶತಮಾನೋತ್ಸವದ ಶತಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಭಾರತ್ ಸೇವಾಶ್ರಮ ಕನ್ಯಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ದೇಣಿಗೆ ಸಮರ್ಪಣೆ ನಡೆಯಿತು .


ಆಶ್ರಮದ ಸುತ್ತ ಬೆಳೆದಿದ್ದ ಕಳೆ ಗಳನ್ನು ಕೀಳುವ ಮೂಲಕ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.

ಸ್ವಚ್ಚತಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ್ ಸೇವಾಶ್ರಮದ ಅಧ್ಯಕ್ಷ ಈಶ್ವರ ಭಟ್ ಅವರಿಗೆ ಸಂಘದ ಶತಮಾನೋತ್ಸವದ ಸಮಿತಿ ವತಿಯಿಂದ ರೂ 10,000 ವನ್ನು ದೇಣಿಗೆ ರೂಪದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಸಂಘದ ಅಧ್ಯಕ್ಷ ಬಾಲಕೃಷ್ಣನಾಯಕ್, ತೆಂಕಿಲ ಸೇವಾಶ್ರಮದ ಅಧ್ಯಕ್ಷರಾದ ಈಶ್ವರ ಭಟ್, ವಿಟ್ಲ ಸಂಘದ ಅಧ್ಯಕ್ಷರಾದ ವಾಸುದೇವ ಪ್ರಭು, ಆಜೇರು ಭಜನಾ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಅರುಣ ಪುತ್ತೂರು, ಭಾರತ ಸೇವಾಶ್ರಮದ ಮುಖ್ಯಸ್ಥೆ ವಿಜಯಲಕ್ಷ್ಮಿ, ಯುವ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

ಚೇತನ ಪ್ರಾರ್ಥಿಸಿ, ದೇವಿಪ್ರಸಾದ್ ಕಲ್ಲಾಜೆ ಸ್ವಾಗತಿಸಿ ಪ್ರಾಸ್ತಾವಿಸಿದರು . ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.