ದೈವಾರಾಧನೆ ಬಗ್ಗೆ ಬಿ.ಟಿ. ಲಲಿತಾ ನಾಯ್ಕ್ ವಿವಾದಾತ್ಮಕ ಹೇಳಿಕೆ ಖಂಡನೀಯ

0

ಒಳ್ಳೆಯ ಕೆಲಸ ಮಾಡಿ.. ಇಲ್ಲವೇ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿ- ಸಚಿವ ಎಸ್. ಅಂಗಾರ

ಕಾಣಿಯೂರು: ತುಳುನಾಡಿನ ಸಂಸ್ಕೃತಿ, ಭೂತಾರಾಧನೆ ಹಾಗೂ ದೈವನರ್ತಕರ ಬಗ್ಗೆ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡನೀಯ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

‘ಸುದ್ದಿ’ಯೊಂದಿಗೆ ಮಾತನಾಡಿದ ಸಚಿವರು ನಮ್ಮ ಸಂಸ್ಕೃತಿಗೆ ಸಂಬಂಧಪಟ್ಟ ಹಾಗೇ ನಾವೆಲ್ಲರೂ ನಂಬಿಕೆ ಇರುವ ವ್ಯಕ್ತಿಗಳು, ನಾವು ದೇವರನ್ನು ಪೂಜಿಸುತ್ತೇವೆ. ದೈವವನ್ನು ಆರಾಧನೆ ಮಾಡುತ್ತೇವೆ. ಈ ರೀತಿಯ ದೈವಾರಾಧನೆಯನ್ನು ಮಾಡುವಂತಹ ಸಮುದಾಯದವರಿಗೆ ಮಾಸಾಶನ ಕೊಡಬೇಕು ಎಂಬುದಾಗಿ ಸರಕಾರ ಘೋಷಣೆ ಮಾಡಿದೆ. ಆದರೆ ಇದರ ಬಗ್ಗೆ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ಟೀಕೆಯನ್ನು ಮಾಡುತ್ತಿದ್ದಾರೆ. ಲಲಿತಾ ನಾಯ್ಕ್ ಅವರು ಕೈಯಿಂದ ಕೊಡುವಂತಹ ಅವಶ್ಯಕತೆಯಿಲ್ಲ. ಮಾಸಾಶನ ಕೊಡುವಂತದ್ದು, ಕರ್ನಾಟಕ ಸರಕಾರ. ಅವರಿಗೆ ನಂಬಿಕೆ ಇಲ್ಲದಿದ್ದರೆ ನಂಬಬೇಕು ಎಂಬುದಾಗಿ ನಾವು ಹೇಳುವುದಿಲ್ಲ. ಆದರೆ ನಂಬಿಕೆ ಇರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಆರೋಪಗಳನ್ನು ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು. ಅಧಿಕಾರ ಕಳೆದುಕೊಂಡ ಕಾಂಗ್ರೆಸಿಗರು ಈ ರೀತಿಯ ಕೆಲಸವನ್ನು ಮಾಡುತ್ತಾರೆ. ಈ ರೀತಿಯ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ ಸಚಿವರು, ದೈವಾರಾಧನೆ ಮಾಡುವಂತಹ ಜನಾಂಗಗಳಿಗೆ ಮಾಸಾಶನ ಕೊಡುವ ಸಂದರ್ಭದಲ್ಲಿ ಈ ರೀತಿಯ ಟೀಕೆಗಳನ್ನು ಮಾಡುವುದನ್ನು ಮತ್ತು ಅಂತಹ ಜನಾಂಗಗಳಿಗೆ ನೋವು ಕೊಡುವಂತಹ ಕೆಲಸವನ್ನೂ ಬಿಟ್ಟು, ಒಳ್ಳೆಯ ಕೆಲಸ ಮಾಡಿ ಅಥವಾ ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿ. ಪ್ರೋತ್ಸಾಹ ಕೊಡದಿದ್ದರೆ ಮಾತನಾಡದೇ ಸುಮ್ಮನೆ ಕುಳಿತು ಕೊಳ್ಳಿ ಎಂದು ಹೇಳಿದರು.

LEAVE A REPLY

Please enter your comment!
Please enter your name here