ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಉದ್ಘಾಟನೆ

ಅವಕಾಶಗಳನ್ನು ಯೋಗ್ಯ ರೀತಿಯಲ್ಲಿ ಬಳಸುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಹರಿಪ್ರಸಾದ್ ಎಸ್.

ಪುತ್ತೂರು: ಯಶಸ್ಸು ಎನ್ನುವಂತದ್ದು ನಮ್ಮಿಂದ ಬಹಳ ದೂರದಲ್ಲಿದೆ. ಆದರೆ ಆ ದೂರವನ್ನು ಕ್ರಮಿಸಲು ಪರಿಶ್ರಮ, ಏಕಾಗ್ರತೆ ಅಗತ್ಯ. ಅದರೊಂದಿಗೆ ಸಣ್ಣ ಪುಟ್ಟ ಯಶಸನ್ನು ಸಂಭ್ರಮಿಸುವ ಗುಣ ನಮ್ಮಲ್ಲಿರಬೇಕು. ಅದು ಯಶಸ್ಸಿನ ಕಡೆಗೆ ಸಾಗುವ ಮೊದಲನೇ ಹಂತ. ಇಷ್ಟು ಮಾತ್ರವಲ್ಲದೇ ನಮ್ಮ ಸುತ್ತಮುತ್ತ ಅನೇಕ ಅವಕಾಶಗಳಿವೆ. ಅವುಗಳು ನಮ್ಮನ್ನು ಕೈ ಬೀಸಿ ಕರೆಯುವುದಿಲ್ಲ. ನಾವೇ ಅವಕಾಶಗಳನ್ನು ಅರಸಿಕೊಂಡು ಹೋಗಬೇಕು. ಕೆಲವೊಂದು ಬಾರಿ ಅವಕಾಶಗಳು ಇಲ್ಲವೆಂದು ಸುಮ್ಮನೇ ಕೂರದೆ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿ ಮುಂದುವರಿಯುವಂತಾಗಬೇಕು ಎಂದು ಪುತ್ತೂರಿನ ಬೆಟ್ಟಂಪಾಡಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಎಸ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ (ಸ್ವಾಯತ್ತ) ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ವಾಣಿಜ್ಯ ಸಂಘದ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ವಿದ್ಯೆ, ಕೌಶಲ್ಯ, ಆತ್ಮ ವಿಶ್ವಾಸ ಇದು ಮೂರು ಬಹು ಮುಖ್ಯವಾದಂತಹ ಘಟಕಗಳಾಗಿವೆ. ಜೀವನದಲ್ಲಿ ಗುರಿ ಇರಬೇಕು, ಆ ಗುರಿಯನ್ನು ತಲುಪಲು ಬೇಕಾದ ಪರಿಶ್ರಮ ನಮ್ಮಲ್ಲಿರಬೇಕು.ನಿಮ್ಮ ಮುಂದಿರುವ ವೇದಿಕೆಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಂಡಾಗ ವ್ಯಕ್ತಿತ್ವ ವಿಕಸನವೂ ಆಗುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕಿ ಅಕ್ಷತಾ ನಾಯಕ್, ವಿದ್ಯಾರ್ಥಿಗಳಾದ ಗುಣಶಕ್ತಿ, ಜ್ಯೋತಿಕಾ ಉಪಸ್ಥಿತರಿದ್ದರು. ಅಶ್ವಿನಿ, ಶ್ರೀವಿದ್ಯಾ ಪ್ರಾರ್ಥಿಸಿ, ಗುಣಶಕ್ತಿ ಸ್ವಾಗತಿಸಿದರು. ಜ್ಯೋತಿಕಾ ವಂದಿಸಿ, ದೀಪ್ತಿ. ಬಿ.ಎಸ್ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.