ನೆಲ್ಯಾಡಿ: ಜೀಸಸ್ ಟಯರ‍್ಸ್‌ನ ವಿಸ್ತೃತ ಮಳಿಗೆ ಶುಭಾರಂಭ

ನೆಲ್ಯಾಡಿ: ನೆಲ್ಯಾಡಿಯಲ್ಲಿ ಕಳೆದ 20 ವರ್ಷಗಳಿಂದ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ನೀಡುತ್ತಿರುವ, ಪ್ರಖ್ಯಾತ ಕಂಪನಿಗಳ ಟಯರ್ ಮತ್ತು ಟ್ಯೂಬ್ ಮಾರಾಟ ಸಂಸ್ಥೆ ಜೀಸಸ್ ಟಯರ‍್ಸ್‌ನ ವಿಸ್ತೃತ ಮಳಿಗೆ ಹಾಗೂ ವೀಲ್ ಎಲೈನ್‌ಮೆಂಟ್ ವಿಭಾಗ ನೆಲ್ಯಾಡಿ ಮುಖ್ಯರಸ್ತೆಯಲ್ಲಿ, ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯ ಮುಂಭಾಗದ ನೂತನ ಕಟ್ಟಡದಲ್ಲಿ ನ.9ರಂದು ಬೆಳಿಗ್ಗೆ ಶುಭಾರಂಭಗೊಂಡಿತು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಬಿನೋಯ್‌ರವರು ವಿಸ್ತೃತ ಮಳಿಗೆ ಉದ್ಘಾಟಿಸಿ ಆಶೀರ್ವಚನ ವಿಧಿ ವಿಧಾನ ನೆರವೇರಿಸಿದರು. ಬಳಿಕ ಮಾತನಾಡಿದ ರೆ.ಫಾ.ಬಿನೋಯ್‌ರವರು, ಮಂಗಳೂರು ಹಾಗೂ ಬೆಂಗಳೂರು ನಗರವನ್ನು ಒಂದುಗೂಡಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆ ದಿನದಿಂದ ದಿನಕ್ಕೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಗ್ರಾಹಕರಿಗೆ ಬೇಕಾದ ಎಲ್ಲಾ ರೀತಿಯ ಸೇವೆಗಳು ಸಿಗುತ್ತಿವೆ. ನೆಲ್ಯಾಡಿಯಲ್ಲಿ 20 ವರ್ಷಗಳ ಹಿಂದೆಯೇ ಜೀಸಸ್ ಟಯರ‍್ಸ್ ಸಂಸ್ಥೆ ಸ್ಥಾಪಿಸಿ ಟಯರ್ ಮಾರಾಟ ಮತ್ತು ಸೇವೆಯಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹ ರೀತಿಯ ಸೇವೆ ನೀಡುತ್ತಿರುವ ಜೇಮ್ಸ್‌ರವರು ಇದೀಗ ವೀಲ್ ಎಲೈನ್‌ಮೆಂಟ್‌ನ ಜೊತೆಗೆ ನೆಲ್ಯಾಡಿ ಪೇಟೆಯ ಮಧ್ಯಭಾಗದಲ್ಲಿಯೇ ವಿಸ್ತೃತ ಮಳಿಗೆ ಆರಂಭಿಸಿರುವುದು ವಾಹನ ಮಾಲಕರಿಗೆ ಹೆಚ್ಚಿನ ಅನುಕೂಲ ಆಗಿದೆ. ಅವರಿಂದ ಜನರಿಗೆ ಇನ್ನಷ್ಟೂ ಒಳ್ಳೆಯ ರೀತಿಯ ಸೇವೆ ಸಿಗುವುದರೊಂದಿಗೆ ವ್ಯಾಪಾರದಲ್ಲೂ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕ ಜಾನ್, ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿ ಜೋಸ್ ಕೆ.ಜೆ.ರವರು ನೂತನ ಮಳಿಗೆಗೆ ಶುಭಹಾರೈಸಿದರು. ನೆಲ್ಯಾಡಿಯ ವರ್ತಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಧಾರ್ಮಿಕ, ಸಾಮಾಜಿಕ ಮುಖಂಡರು ಭೇಟಿ ನೀಡಿ ಶುಭಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಾಲಕ ಜೇಮ್ಸ್ ಎನ್.ಎಂ.ರವರು, ನೆಲ್ಯಾಡಿಯಲ್ಲಿ ಜೀಸಸ್ ಟಯರ‍್ಸ್ 20 ವರ್ಷಗಳ ಹಿಂದೆಯೇ ಆರಂಭಗೊಂಡಿದ್ದು ಹೆಸರಾಂತ ಕಂಪನಿಗಳ ಟಯರ್ ಮಾರಾಟ ಮಾಡುತ್ತಿದ್ದೇವೆ. ಜೊತೆಗೆ ಸರ್ವೀಸ್ ಸಹ ನೀಡುತ್ತಿದ್ದೇವೆ. 8 ವರ್ಷದ ಹಿಂದೆ ನೆಲ್ಯಾಡಿ ಗಾಂಧಿ ಮೈದಾನದ ಬಳಿ ಜೀಸಸ್ ಟಯರ್ ರಿಸೋಲ್ ವರ್ಕ್ಸ್ ಆರಂಭಿಸಿದ್ದೇವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಇದೀಗ ಗ್ರಾಹಕರ ಅನುಕೂಲಕ್ಕಾಗಿ ನೆಲ್ಯಾಡಿ ಪೇಟೆಯ ಮಧ್ಯ ಭಾಗದಲ್ಲಿ ವೀಲ್ ಎಲೈನ್‌ಮೆಂಟ್ ವಿಭಾಗದೊಂದಿಗೆ ವಿಸ್ತೃತ ಮಳಿಗೆ ಆರಂಭಿಸಿದ್ದೇವೆ. ಇಲ್ಲಿ ವೀಲ್ ಎಲೈನ್‌ಮೆಂಟ್, ವೀಲ್ ಬ್ಯಾಲೆನ್ಸಿಂಗ್, ಅಟೋಮೆಟಿಕ್ ಟಯರ್ ಚೇಂಜಿಗ್, ಗಾಳಿ ತುಂಬಿಸುವ ವ್ಯವಸ್ಥೆ ಇದೆ. ಎಲ್ಲಾ ವಾಹನಗಳ ಹೆಸರಾಂತ ಕಂಪನಿಗಳ ಟಯರ್ ಹಾಗೂ ಟ್ಯೂಬ್‌ಗಳು ಲಭ್ಯವಿದೆ. ಗ್ರಾಹಕರು ಎಂದಿನಂತೆ ಸಹಕಾರ ನೀಡಬೇಕೆಂದು ಹೇಳಿದರು. ಮಾಲಕರ ಪತ್ನಿ ಶೈನಿ ಜೇಮ್ಸ್, ಮಕ್ಕಳಾದ ಅಲೆನ್, ಅಲ್ವಿನಾರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.