ನ.13: ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾಕೇಂದ್ರದ ವಾರ್ಷಿಕೋತ್ಸವ

ನೆಲ್ಯಾಡಿ: ಶಬರೀಶ ಯಕ್ಷಗಾನ ಕಲಾಕೇಂದ್ರ ನೆಲ್ಯಾಡಿ ಇದರ 5ನೇ ವರ್ಷದ ವಾರ್ಷಿಕೋತ್ಸವ, ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ಶಬರೀಶ ಕಲಾಕೇಂದ್ರದ ಮಕ್ಕಳಿಂದ ಯಕ್ಷಗಾನ, ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರಿಂದ ಯಕ್ಷ ಹಾಸ್ಯ ಸಂಭ್ರಮ ನ.13ರಂದು ಸಂಜೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಶಬರೀಶ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಯಕ್ಷಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ತಿಳಿಸಿದ್ದಾರೆ.

ಸಂಜೆ 3ರಿಂದ ಸತೀಶ್ ಶೆಟ್ಟಿ ಪಟ್ಲ ಇವರ ಸಾರಥ್ಯದಲ್ಲಿ ಯಕ್ಷಗುರು ಪ್ರಶಾಂತ್ ಶೆಟ್ಟಿಯವರ ಶಿಷ್ಯವೃಂದ ಮತ್ತು ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ’ ವಿಶ್ವಾಮಿತ್ರ-ಮೇನಕೆ ’ಯಕ್ಷಗಾನ ನಡೆಯಲಿದೆ. ಸಂಜೆ 6ರಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ರಂಗಪೂಜೆ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೈಕಂಬ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಯಕ್ಷಕಲಾ ಪೋಷಕರೂ ಆಗಿರುವ ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್, ಪಟ್ಲ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾವೃಂದದ ಅಧ್ಯಕ್ಷ ಗುಡ್ಡಪ್ಪ ಗೌಡ, ಬೆಂಗಳೂರಿನ ಉದ್ಯಮಿ ಹೇಮಂತ ರೈ ಮನವಳಿಕೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಆನಂದ ಶೆಟ್ಟಿ ದೋಂತಿಲ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಿನೇಶ್ ರೈ ಕಡಬ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಯಕ್ಷಗಾನ ಕಲಾ ಸಾಧಕ ಜೋಸೆಫ್ ಡಿ.ಸೋಜರವರಿಗೆ ಅಭಿನಂದನೆ ಹಾಗೂ ಶಬರೀಶ ಕಲಾಕೇಂದ್ರದ ಪೂರ್ವಾಧ್ಯಕ್ಷ ಸುಧೀರ್ ಕೆ.ಎಸ್.ಅವರಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಶಬರೀಶ ಕಲಾಕೇಂದ್ರದ ಮಕ್ಕಳಿಂದ ಯಕ್ಷಗಾನ ’ದಕ್ಷ-ಯಜ್ಞ ’, ನಂತರ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರಾದ ದಿನೇಶ್ ರೈ ಕಡಬ, ಸುಂದರ ಬಂಗಾಡಿ ಹಾಗೂ ಸಿ.ಕೆ.ಪ್ರಶಾಂತ್ ಅವರಿಂದ ’ಯಕ್ಷ ಹಾಸ್ಯ ಸಂಭ್ರಮ’ ನಡೆಯಲಿದ್ದು ಹಿಮ್ಮೇಳದಲ್ಲಿ ಗಾನಮಂದಾರ ಗಿರೀಶ್ ಕಕ್ಕೆಪದವು ಸಹಕರಿಸಲಿದ್ದಾರೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.