ಅಡಕೆಗೆ ಪೃಕೃತಿಯ ಪ್ರತಿಕೂಲ ಪರಿಣಾಮ : ಅರ್ಬಿ ದೇವಸ್ಥಾನದಲ್ಲಿ ನ. 13 ರಂದು ಮಹಾ ಪೂಗಪೂಜೆ

ಕಡಬ: ಇತ್ತೀಚಿನ ದಿನಗಳಲ್ಲಿ ಪೃಕೃತಿ ಮುನಿಸಿಕೊಂಡು ಜಗತ್ತಿನಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಂತಾಗಿದೆ, ಅಡಕೆ ಕೃಷಿಕರಂತು ಹಳದಿ, ಎಲೆ ಚುಕ್ಕಿ ರೋಗ ಭಾದೆ, ಬೆಳೆ ನಷ್ಟದಿಂದಾಗಿ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ 13 ರಂದು ರೈತರು ಸುಳಿದ ಅಡಕೆಯನ್ನು ಸಮರ್ಪಿಸಿ ಮಹಾ ಪೂಗ ಪೂಜೆಯನ್ನು ನಡೆಸಲಿದ್ದಾರೆ ಎಂದು ಅರ್ಬಿ ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಕುಮಾರ್ ಅತ್ರಿಜಾಲ್ ತಿಳಿಸಿದರು.

ಅವರು ನ.9 ರಂದು  ಕಡಬದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಂತಹ ಒಂದು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ವೇದ ಮೂರ್ತಿ ನರಸಿಂಹ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರಾಭಿವೃದ್ಧಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶತರುದ್ರಾಭಿಷೇಕ ಮತ್ತು ಸುಳ್ಯದ ಪುರೋಹಿತ ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸಾಂಭಸದಾಶಿವಾರಾಧನೆ ಸಹಿತ ಮಹಾ ಪೂಗ ಪೂಜೆ ನಡೆಯಲಿದೆ ಎಂದರು. ಪೂಗ ಅಂದರೆ ಅಡಕೆ, ಅಡಕೆಯಲ್ಲಿ ಶಾಂಬಸದಾಶಿವ ದೇವರನ್ನು ಪ್ರತಿಷ್ಠೆ ಮಾಡಿ ಕಲಶ ಪ್ರತಿಷ್ಠೆ ಮಾಡಿದ ಬಳಿಕ ಎಲ್ಲಾ ರೈತರಿಗೆ ಪೂಜೆ ಮಾಡುವ ಅವಕಾಶವಿದೆ. ಪುರೋಹಿತರು ರುದ್ರಾಭಿಷೇಕ ಮಾಡಿದ ಬಳಿಕ ಪ್ರತಿಯೊಬ್ಬ ಕೃಷಿಕ ಸುಳಿದ ಸ್ವಚ್ಛ ಅಡಕೆಯನ್ನು ಐದು ಬೊಗಸೆಯಷ್ಟು ತಂದು ಸಮರ್ಪಣೆ ಮಾಡಿ ಪೂಜೆ ಸಲ್ಲಿಸುವ ಕಾರ್ಯ ನಡೆಯಲಿದೆ. ಈ ಪೂಜೆ ಕರ್ನಾಟಕದ ಶಿವಮೊಗ್ಗ ಕಡೆ ನಡೆಯುತ್ತದೆ. ಅಲ್ಲಿ ಅಡಕೆಯನ್ನು ತಂದು ರಾಶಿ ಹಾಕಿ ಅದಕ್ಕ ಪೂಜೆ ಮಡಲಾಗುತ್ತದೆ. ಆದರೆ ನಮ್ಮಲ್ಲಿ ಪ್ರತಿಯೊಬ್ಬ ಕೃಷಿಕರೇ ಅಡಕೆ ಸಮರ್ಪಿಸಿ ಪೂಜೆ ಸಲ್ಲಿಸುವ ಸದವಕಾಶ ದೊರೆಯಲಿದೆ ಆದ್ದರಿಂದ ಇದು ರಾಜ್ಯದಲ್ಲಿ ಪ್ರಥಮವಾಗಿದೆ.
ಬೆಳಿಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪೂಗ ಪೂಜೆಗೆ ಅಡಕೆ ಸಮರ್ಪಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ ಬೇರೆ ಬೇರೆ ದೇವಸ್ಥಾನಗಳು, ಮಠಗಳ, ಸಂಘ ಸಂಸ್ಥೆಗಳ ಪ್ರಮುಖರು ಅಡಕೆ ಸಮರ್ಪಣೆ ಮಾಡಿದ ಬಳಿಕ ಊರಿನ ಪ್ರತಿಯೊಬ್ಬ ಕೃಷಿಕನಿಗೆ ಅವಕಾಶವಿದೆ, ವಿಶೇಷ ಮಂತ್ರದೊಂದಿಗೆ ಬಿಲ್ವಪತ್ರೆ ಸಹಿತ ಹರಿವಾಣದಲ್ಲಿ ಅಡಕೆಯನ್ನಿಟ್ಟು ಸಮರ್ಪಣೆ ಮಾಡಲಾಗುವುದು. ರಾತ್ರಿ ವಿಶೇಷ ಕಾರ್ತಿಕ ಪೂಜೆ, ರಂಗಪೂಜೆ, ದೀಪೋತ್ಸವ ನಡೆಯಲಿದೆ ಎಂದು ವಿವರ ನೀಡಿದ ಕೃಷ್ಣ ಕುಮಾರ್ ನಮ್ಮ ದೇವಸ್ಥಾನ 2017 ರಲ್ಲಿ ಬ್ರಹ್ಮಕಲಶೋತ್ಸವಗೊಂಡ ಬಳಿಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಸಭಾಭವನ, ಎರಡು ಕೊಠಡಿ, ಹೊರಾಂಗಣದಲ್ಲಿ ಇಂಟರ್‌ಲಾಕ್ ಅಳವಡಿಕೆ ನಡೆದಿದೆ. ಧಾರ್ಮಿಕ ಶಿಕ್ಷಣ ಹಾಗೂ ಅನ್ನ ಸಂತರ್ಪಣೆಗಾಗಿ ಸಭಾಭವನ ಮಾಡುತ್ತಿದ್ದೇವೆ ಈಗಾಗಲೇ ಶೇ 30 ಕೆಲಸ ಆಗಿದೆ, ಜನವರಿಯಲ್ಲಿ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಪೂಗ ಪೂಜಾ ಸಮಿತಿಯ ಅಧ್ಯಕ್ಷೆ ಯಮುನಾ ಎಸ್ ರೈ ಗುತ್ತುಪಾಲು, ಗೌರವಾಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಕಾರ್ಯಾಧ್ಯಕ್ಷ ಸೋಮಪ್ಪ ಗೌಡ ಎರ್ಮಾಳ, ಕಾರ್ಯದರ್ಶಿ ಚೆನ್ನಕೇಶವ ರೈ ಗುತ್ತುಪಾಲು, ಗೌರವ ಸಲಹೆಗಾರ ನಾರಾಯಣ ಪ್ರಭು ಆಲಂಕಾರು, ಸಲಹೆಗಾರ ಶೇಷಪತಿ ರೈ ಗುತ್ತುಪಾಲು, ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನ ಸದಸ್ಯ ಗುರರಾಜ್ ರೈ ಕೇವಳ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.