ನ.12 : ಪುತ್ತೂರು ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಪುತ್ತೂರು: ತಾಲೂಕು ಪಂಚಾಯತ್ ಪುತ್ತೂರು, ಕಡಬ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ತಾಲೂಕು ಯುವಜನ ಒಕ್ಕೂಟ(ರಿ) ಪುತ್ತೂರು ಕಡಬ, ಸೌಜನ್ಯ ಯುವಜನ ಸಂಘ(ರಿ) ಸಾಜ, ಸವಣೂರು ಯುವಕ ಮಂಡಲ(ರಿ), ರೋಟರಾಕ್ಟ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ಪುತ್ತೂರು ಕಡಬ ತಾಲೂಕು ಮಟ್ಟದ ಗ್ರಾಮದ ಕ್ರೀಡಾಕೂಟ ನ.12 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.

ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷರಾದ ಜೀವಂದರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಗರ ಸಭಾ ಸದಸ್ಯರಾಸ ಜಗನ್ನಿಸರಾವ್, ಉಪವಿಭಾಗಾಧಿಕಾರಿ ಗೀರಿಶ್ ನಂದನ್ ಎಂ, ಪೋಲಿಸ್ ಉಪ ಅಧೀಕ್ಷರಾದ ಡಾ.ವೀರಯ್ಯ ಹೀರೆಮಠ, ತಹಶಿಲ್ದಾರ್ ನಿಸರ್ಗಪ್ರಿಯ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತರಾದ ಮಧು ಎಸ್ ಮನೋಹರ್, ದಕ್ಷಿಣ ಕನ್ನಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ ವೈ ನಾಯಕ್, ಕ್ಷೇತ್ರ ಶಿಕ್ಷಾಧಿಕಾರಿ ಲೋಕೇಶ್ ಎಸ್.ಆರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಪುತ್ತೂರು ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಕಡಬ ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಸೌಜನ್ಯ ಯುವಜನ ಸಂಘದ ಅಧ್ಯಕ್ಷ ಅಣ್ಣು ನಾಯ್ಕ ಮುರುಂಗಿ, ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಉಪಸ್ಥಿತರಿರಲಿದ್ದಾರೆ ಎಂದು ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೆಲ್ವೀಚಾರಕ ಶ್ರೀಕಾಂತ್ ಬಿರಾವು ಪ್ರಕಟಣೆ ನೀಡಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.