ಇಂಡಿಯ ಬುಕ್ ಆಫ್ ರೆಕಾರ್ಡ್ ‌ನಲ್ಲಿ ದಾಖಲೆ ಬರೆದ ಕುದ್ಮಾರಿನ ರಾಶಿ ಕೆ.ಎಸ್

ಕಾಣಿಯೂರು : ಒಂದು ಗಂಟೆ 22 ಸೆಕೆಂಡ್‌ನಲ್ಲಿ ಗರಿಷ್ಠ ಸಮಯದಲ್ಲಿ ನಾನ್‌ ಸ್ಟಾಪ್ 69ಬಾರಿ ರಾಷ್ಟ್ರಗೀತೆಯನ್ನು ಹಾಡಿ ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ರಾಶಿ ಕೆ.ಎಸ್ ಅವರು ದಾಖಲೆ ಬರೆದಿದ್ದಾರೆ.

 

ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‌8 ನೇ ತರಗತಿ ವಿದ್ಯಾರ್ಥಿನಿಯಾಗಿರುವ ರಾಶಿ ಕೆ.ಎಸ್ ಅವರು ಸುಗಮ ಸಂಗೀತವನ್ನು ಪುತ್ತೂರು ಗಾನಸಿರಿ ಕಲಾಕೇಂದ್ರದ ಡಾ.ಕಿರಣ್ ಕುಮಾರ್ ಹಾಗೂ ಕು.ಶ್ರೀ ಲಕ್ಷ್ಮೀ ಪುತ್ತೂರು ಮತ್ತು ಜಾನಪದ ಶೈಲಿಯ ಸಂಗೀತವನ್ನು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆಯಲ್ಲಿ ಗುರುಪ್ರಿಯಾ ನಾಯಕ್ ಅವರಲ್ಲಿ ಹಾಗೂ ಶಾಸ್ತ್ರೀಯ ಸಂಗೀತವನ್ನು ಮಾಲಿನಿ ಕೃಷ್ಣಮೋಹನ್ ಪುತ್ತೂರು ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಇವರು ಕಡಬ ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಚಂದ್ರಶೇಖರ ಗೌಡ ಹಾಗೂ ಜ್ಞಾನೇಶ್ವರಿ ದಂಪತಿಯ ಪುತ್ರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.