ನ.12: ಚಂದನ ವಾಹಿನಿಯಲ್ಲಿ ಪುತ್ತೂರು ನಾಟ್ಯರಂಗದ ಯಶೋಧರೆ ನೃತ್ಯ ರೂಪಕ

ಪುತ್ತೂರು : ಪುತ್ತೂರು ನಾಟ್ಯರಂಗದ ಕಲಾವಿದರು ಪ್ರಸ್ತುತ ಪಡಿಸುವ ಯಶೋಧರೆ ನೃತ್ಯ ರೂಪಕ ನ.12 ಶನಿವಾರದಂದು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ. ನಾಟ್ಯರಂಗದ ನೃತಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಈ ನೃತ್ಯರೂಪಕವನ್ನು ನಿರ್ದೇಶಿಸಿರುತ್ತಾರೆ. ಯಶೋಧರೆ ನೃತ್ಯರೂಪಕಕ್ಕೆ ಗಂಗಾಧರ ಬೆಳ್ಳಾರೆಯವರ ಸಾಹಿತ್ಯವಿದ್ದು, ಗುರುರಾಜ್ ಮಂಗಳೂರು ಸಂಗೀತ ನಿರ್ದೇಶಿಸಿರುತ್ತಾರೆ. ಪ್ರಣವ ಬೆಳ್ಳಾರೆಯವರು ಕಲಾಕೃತಿಗಳನ್ನು ನೃತ್ಯರೂಪಕ್ಕಾಗಿ ರಚಿಸಿರುತ್ತಾರೆ. ನಾಟ್ಯರಂಗದ ಸುಮಾರು ಹದಿನೈದು ಕಲಾವಿದರು ಈ ರೂಪಕದಲ್ಲಿ ಭಾಗವಹಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.