ವಿಟ್ಲ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ “ಕನ್ನಡ ಡಿಂಡಿಮ-2022”

0

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ನೌಶೀನ್ ಬದ್ರಿಯಾ ರವರು ಧ್ವಜಾರೋಹಣಗೈದರು.

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಪತ್ರಕರ್ತ, ಬರಹಗಾರ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿರವರು ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಮಾತ್ರವಲ್ಲದೇ ಎಲ್ಲಾ ಚಟುವಟಿಕೆಗಳು, ಕಲೆ, ಕ್ರೀಡೆ ಇತರ ಎಲ್ಲಾ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಮಕ್ಕಳನ್ನು ಮೇಲೆತರುವಲ್ಲಿ ಒತ್ತು ನೀಡುವ ನಿಟ್ಟಿನಲ್ಲಿ ಜನಪ್ರಿಯ ಸ್ಕೂಲ್ ನ ಆಡಳಿತ ಮಂಡಳಿ ಮತ್ತು ಶಿಕ್ಷಕರು ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ ಎಂದರು.
ಶಾಲೆಯ ವತಿಯಿಂದ ಶಂಶೀರ್ ಬುಡೋಳಿರವರನ್ನು ಸನ್ಮಾನಿಸಲಾಯಿತು.

ಶಾಲಾ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ರವರು ಮಾತನಾಡಿ ಮಕ್ಕಳಿಗೆಕನ್ನಡ ನಾಡು, ಸಂಸ್ಕ್ರತಿ, ಭಾಷೆಯ ಮಹತ್ವವನ್ನು ತಿಳಿಸಿದರು.
ಪ್ರಾಂಶುಪಾಲರಾದ ಪ್ರಿಯಾ ದುರೈರಾಜ್ ರವರು ಮಕ್ಕಳಿಗೆ ಶುಭಹಾರೈಸಿದರು

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು ನೃತ್ಯ, ನಾಡಗೀತೆ, ಒನಕೆ ಓಬವ್ವರ ನಾಟಕ, ಭಾಷಣ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿಗಳಾದ ನಫೀಸ ಸ್ವನೀಹ ಸ್ವಾಗತಿಸಿ, ಶಝ್ನ ವಂದಿಸಿದರು. ಹಿಬಾ ಮರಿಯಂ ಮತ್ತು ಝುಲ್ಫಾ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here