ಬೆಳಂದೂರು: ಮಹಿಳಾ ಗ್ರಾಮ ಸಭೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್‌ನ 2022-23ನೇ ಸಾಲಿನ ಮಹಿಳಾ ಗ್ರಾಮ ಸಭೆ ಮತ್ತು ಮಹತ್ಮಾಗಾಂಧಿ ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನವು  ನ.10ರಂದು ಕೆಲೆಂಬೀರಿ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಹಿಸಿದ್ದರು. ಸಹಾಯಕ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಭಾರತಿ, ನರೇಗಾ ಯೋಜನೆಯ ಮಾಹಿತಿ ಸಂವಹನ ಅಧಿಕಾರಿ ಭರತ್ ರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ವಿಠಲ ಗೌಡ ಅಗಳಿ, ಜಯಂತ ಅಬೀರ, ಜಯರಾಮ ಬೆಳಂದೂರು, ಉಮೇಶ್ವರಿ ಅಗಳಿ, ತಾರಾ ಅನ್ಯಾಡಿ, ಪಾರ್ವತಿ ಮರಕ್ಕಡ, ಹರಿಣಾಕ್ಷಿ ಬನಾರಿ, ಗೀತಾ ಕುವೆತ್ತೋಡಿ, ಗೌರಿ ಮಾದೋಡಿ, ಪ್ರವೀಣ್ ಕೆರೆನಾರು, ಕುಸುಮಾ ಅಂಕಜಾಲು ಉಪಸ್ಥಿತರಿದ್ದರು. ಪಿಡಿಓ ನಾರಾಯಣ್, ಲೆಕ್ಕ ಸಹಾಯಕಿ ಸುನಂದ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.