ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪ್ರದರ್ಶನ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದಲ್ಲಿ ನ.8ರಂದು ಮೊದಲ ವರ್ಷದ ಪದವಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನದ ವಿಶಿಷ್ಟ ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಪದವಿಗರು ಅಂತಿಮ ವರ್ಷದವರ ಉಪಸ್ಥಿತಿಯಲ್ಲಿ ಆಯೋಜಿಸಿದರು.

ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ಲೇಖನಿಗಳನ್ನು ನೀಡಿ ಪ್ರತಿಯೊಬ್ಬ ನೂತನಿಗರನ್ನು ಸ್ವಾಗತಿಸಿದರು. ಸುಮಾರು 45 ನಿಮಿಷಗಳ ಕಾಲ ಮೊದಲ ವರ್ಷದವರು ನೀಡಿದ ಹಾಡು, ನೃತ್ಯ, ಹಾಸ್ಯದ ತುಣುಕುಗಳಿಂದ ಸಾಂಸ್ಕೃತಿಕ ವೈವಿಧ್ಯ ಅನಾವರಣಗೊಂಡಿತು. ನೂತನರು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಮೊದಲ ವರ್ಷ ಬಿ.ಕಾಂ.ವಿದ್ಯಾರ್ಥಿನಿ ಪೂಜ್ಯ ಕಾರ್ಯಕ್ರಮ ನಿರ್ವಹಿಸಿದರು. ತದನಂತರ ಹೊಸಬರಿಗೆ ಕೆಲವು ವಿನೋದ ಸ್ಪರ್ಧೆಗಳನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನ ಹಂಚಲಾಯಿತು. ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರ ಉಪಸ್ಥಿತಿ ಕಾರ್ಯಕ್ರಮದ ಅಂದಕ್ಕೆ ಮೆರುಗು ನೀಡಿತು. ಸುಮಾರು 2 ಗಂಟೆಗಳ ಈ ಕಾರ್ಯಕ್ರಮದ ಅಂತ್ಯದಲ್ಲಿ ಲಘು ಉಪಾಹಾರದ ವ್ಯವಸ್ಥೆಯೂ ಇತ್ತು. ದ್ವಿತೀಯ ವಾಣಿಜ್ಯ ವಿಭಾಗದ ಬಿಂದ್ಯಶ್ರೀ ಮತ್ತು ಕಲಾವಿಭಾಗದ ಚೈತನ್ಯ ವೇದಿಕೆಯ ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.