ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ವದ ಹಿನ್ನೆಲೆ ಅಳಿಕೆ ಸಣ್ಣ ಗುತ್ತು ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳ 5ರಿಂದ 10ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ನೇಮಿರಾಜ್ ಪೂಜಾರಿ ಅಳಿಕೆ ಯವರ ಅಧ್ಯಕ್ಷತೆಯಲ್ಲಿ ಅಳಿಕೆ ವಲಯ ಸಮಿತಿಯ ರಚನೆಯ ಸಭೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.

ನೇಮಿರಾಜ್ ಅಳಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಶೋಧರ ಬಂಗೇರ ಅಳಿಕೆ, ಕುಕ್ಕಾಜೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು, ಬಾಲಕೃಷ್ಣ ಪೂಜಾರಿ ಅಳಿಕೆ, ಜನಾರ್ದನ ಬಂಗೇರ, ನೋಣಯ್ಯ ಪೂಜಾರಿ, ವಿಶ್ವನಾಥ ಪೂಜಾರಿ ಚೆಂಡುಕಳ, ಶ್ರೀನಿವಾಸ ಪೂಜಾರಿ ಮುಳಿಯ ದಂಬೆ, ಕುಕ್ಕಾಜೆ ಕ್ಷೇತ್ರದ ರವಿ ಎಸ್.ಎಂ., ಲಕ್ಷ್ಮಣ ಪಿಲಿಂಗುರಿ, ಶ್ರೀಧರ್ ಪಿ.ಕೆ. ಕುಕ್ಕಾಜೆ, ಸತ್ಯ ಪ್ರಸಾದ್ ಕುಕ್ಕಾಜೆ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಳಿಕೆ ಸಣ್ಣ ಗುತ್ತು ವಲಯ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಯಶೋಧರ ಬಂಗೇರ, ಬಾಲಕೃಷ್ಣ ಪೂಜಾರಿ ಅಳಿಕೆ, ಅಧ್ಯಕ್ಷರಾಗಿ ನೇಮಿರಾಜ್ ಅಳಿಕೆ, ಉಪಾಧ್ಯಕ್ಷರಾಗಿ ಜನಾರ್ದನ ಬಂಗೇರ, ಶ್ರೀನಿವಾಸ ಪೂಜಾರಿ ಮಳಿಯ ದಂಬೆ, ನೋಣಯ್ಯ ಪೂಜಾರಿ, ವಿಶ್ವನಾಥ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರವೀಣ್ ಸಣ್ಣ ಗುತ್ತು, ಜತೆ ಕಾರ್ಯದರ್ಶಿಯಾಗಿ ಕೀರ್ತನ್ ಸಣ್ಣ ಗುತ್ತು, ಕೋಶಾಧಿಕಾರಿಯಾಗಿ ವಿಶ್ವನಾಥ ಪೂಜಾರಿ ಚೆಂಡುಕಳ,
ಕಾರ್ಯಕಾರಿ ಸದಸ್ಯರುಗಳಾಗಿ ಜನಾರ್ಧನ ಪೂಜಾರಿ ಸಣ್ಣ ಗುತ್ತು, ವೀಕ್ಷಿತ್ ರೈ ಸಣ್ಣ ಗುತ್ತಿನಡ್ಕ, ಜಯಾನಂದ ಪೂಜಾರಿ, ಜಯರಾಮ ಎರುಂಬು, ಪರಮೇಶ್ವರ ಎರುಂಬು, ರಾಘವ ಪೂಜಾರಿ ಸಣ್ಣ ಗುತ್ತು, ಚಂದ್ರಹಾಸ ಪೂಜಾರಿ ಸಣ್ಣ ಗುತ್ತು, ವನೀತ ಗಂಗಾಧರ ಕೋಟ್ಯನ್, ಅಕ್ಷತಾ ಪೂಜಾರಿ ತಾರಿಪಡ್ಪು, ಶ್ವೇತ ಪದ್ಮನಾಭ ಪೂಜಾರಿ ಅಳಿಕೆ ಹಾಗೂ ಸುಮಾರು 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಗುರೂಜಿಯವರನ್ನು ಗೌರವಿಸಲಾಯಿತು. ಪದ್ಮನಾಭ ಪೂಜಾರಿ ಸಣ್ಣಗುತ್ತು ಸ್ವಾಗತಿಸಿ, ಪ್ರವೀಣ್ ಅಳಿಕೆ ವಂದಿಸಿದರು

LEAVE A REPLY

Please enter your comment!
Please enter your name here