ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಲಾವತ್ತಡ್ಕದ ಸ್ಟೈರಿನ್ ಟೋಮ್ ವರ್ಗೀಸ್‌ಗೆ ಚಿನ್ನದ ಪದಕ

0

ಉಪ್ಪಿನಂಗಡಿ: ಈಚೆಗೆ ಉಡುಪಿಯಲ್ಲಿ ನಡೆದ ಬಡೋಕಾನ್ ಕರಾಟೆ ಇಂಟರ್ ನ್ಯಾಶನಲ್ ವತಿಯಿಂದ ನಡೆದ 40ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯ 50/55 ಕೆ.ಜಿ. ವಿಭಾಗದ ಗ್ರೀನ್ ಬೆಲ್ಟ್ ವಿಭಾಗದಲ್ಲಿ ಕಟಾ ಹಾಗೂ ಕುಮಿಟೆಯಲ್ಲಿ ಅನುಕ್ರಮವಾಗಿ ಚಿನ್ನದ ಪದಕವನ್ನು ದೇರಕಟ್ಟೆಯ 10 ನೇ ತರಗತಿ ವಿದ್ಯಾರ್ಥಿ ಸ್ಟೈರಿನ್ ಟೋಮ್ ವರ್ಗೀಸ್ ಪಡೆದುಕೊಂಡಿರುತ್ತಾರೆ.


ಸ್ಟೈರಿನ್ ಟೋಮ್ ವರ್ಗೀಸ್ ಕಡಬ ತಾಲೂಕು, ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕದ ವರ್ಗೀಸ್ ತೋಮಸ್ ಮತ್ತು ಬೀನಾ ತೋಮಸ್ ದಂಪತಿಯ ಪುತ್ರನಾಗಿರುತ್ತಾರೆ. ಇವರು 2019ರಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಚಿನ್ನದ ಪದಕ ಪಡೆದಿದ್ದರು. ಸ್ಟೈರಿನ್ ಟೋಮ್ ವರ್ಗೀಸ್‌ರವರು ಶಿಹಾನ್ ಕಿಶೋರ್ ಕುಮಾರ್ ಬೆಂಗ್ರೆ ಇವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here