ಪುತ್ತೂರು ರಾಷ್ಟ್ರೀಯ ಲೋಕ ಅದಾಲತ್

307 ಪ್ರಕರಣ ಇತ್ಯರ್ಥ: ರೂ.2.77 ಕೋಟಿ ಪರಿಹಾರ ವಿತರಣೆಗೆ ಆದೇಶ

 ಎನ್‌ಐ ಆಕ್ಟ್ನಲ್ಲಿ 342 ಪ್ರಕರಣದಲ್ಲಿ 41 ಇತ್ಯರ್ಥ-ರೂ.61,76,159 ಪರಿಹಾರ
 ಮೋಟಾರ್ ವಾಹನ ಪ್ರಕರಣದಲ್ಲಿ 292ರಲ್ಲಿ 58 ಇತ್ಯರ್ಥ-ರೂ.1.62 ಲಕ್ಷ ಪರಿಹಾರ
 ಕ್ರಿಮಿನಲ್ ಪ್ರಕರಣ 38ರಲ್ಲಿ 7 ಇತ್ಯರ್ಥ

ಪುತ್ತೂರು:ನ್ಯಾಯಾಲಯದಲ್ಲಿ ಹೂಡಲಾಗಿರುವ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ನ.12ರಂದು ಆಯೋಜಿಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪುತ್ತೂರಿನಲ್ಲಿ ಒಟ್ಟು 997 ಪ್ರಕರಣಗಳ ಪೈಕಿ 307 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ಪರಿಹಾರ ಮೊತ್ತವಾಗಿ ರೂ.2,77,14,743 ವಿತರಿಸಲು ಆದೇಶಿಸಲಾಗಿದೆ.


ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ, ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಓಂಕಾರಪ್ಪ ಅವರ ನ್ಯಾಯಾಲಯದಲ್ಲಿ 125 ಪ್ರಕರಣಗಳಲ್ಲಿ 13 ಪ್ರಕರಣ ಇತ್ಯರ್ಥಗೊಂಡಿದೆ.ರೂ.50,58,000 ಸೆಟ್ಲ್ಮೆಂಟ್ ಆಗಿದೆ. ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗೌಡ ಆರ್.ಪಿ ಅವರ ನ್ಯಾಯಾಲಯದಲ್ಲಿ 118 ಪ್ರಕರಣಗಳಲ್ಲಿ 37 ಇತ್ಯರ್ಥಗೊಂಡಿದ್ದು ರೂ.41,78,160 ಸೆಟ್ಲ್ಮೆಂಟ್ ಆಗಿದೆ.ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಪ್ರಭಾರವೂ ಇವರಿಗೆ ಇರುವುದರಿಂದ ಆ ನ್ಯಾಯಾಲಯದಲ್ಲಿ 110 ಪ್ರಕರಣಗಳಲ್ಲಿ 31 ಪ್ರಕರಣಗಳು ಇತ್ಯರ್ಥಗೊಂಡಿದೆ.ರೂ. 83,27,000 ಸೆಟ್ಲ್ಮೆಂಟ್ ಆಗಿದೆ.ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಜೆಎಮ್‌ಎಫ್‌ಸಿ ಅರ್ಚನಾ ಕೆ ಉಣ್ಣಿತ್ತಾನ್ ಅವರ ನ್ಯಾಯಾಲಯದಲ್ಲಿ 326 ಪ್ರಕರಣಗಳಲ್ಲಿ 64 ಪ್ರಕರಣಗಳು ಇತ್ಯರ್ಥಗೊಂಡಿದ್ದು ರೂ.67,42,226 ಸೆಟ್ಲ್ಮಂಟ್ ಆಗಿದೆ.ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್‌ಎಫ್‌ಸಿ ಶಿವಣ್ಣ ಹೆಚ್.ಆರ್ ಅವರ ನ್ಯಾಯಾಲಯದಲ್ಲಿ 179 ಪ್ರಕರಣಗಳಲ್ಲಿ 99 ಇತ್ಯರ್ಥಗೊಂಡಿದ್ದು, ರೂ.6,56,361 ಸೆಟ್ಲ್ಮೆಂಟ್ ಆಗಿದೆ.2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್‌ಎಫ್‌ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ 139 ಪ್ರಕರಣಗಳಲ್ಲಿ 63 ಪ್ರಕರಣ ಇತ್ಯರ್ಥಗೊಂಡಿದ್ದು, ರೂ. 27,52,996 ಸೆಟ್ಲ್ಮೆಂಟ್ ಆಗಿದೆ.6 ನ್ಯಾಯಾಲಯಗಳಲ್ಲಿ ಒಟ್ಟು 307 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ.2,77,14,743 ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲು ಆದೇಶಿಸಲಾಗಿದೆ .ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಸಂತೋಷ್ ಕುಮಾರ್, ಪ್ರವೀಣ್ ಕುಮಾರ್, ಸೀಮಾನಾಗರಾಜ್, ಪ್ರಸಾದ್ ಕೆ, ಜಯರಾಮ ರೈ ಸಹಕರಿಸಿದರು.ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ನೇಮಕ ಮಾಡಿದ್ದರು.

ಜಿಲ್ಲೆಯಲ್ಲಿ 22,262 ಪ್ರಕರಣ ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ದ.ಕ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ನ.12ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 22,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ರಾಜಿಯಾಗಬಲ್ಲ 31,791 ಪ್ರಕರಣಗಳನ್ನು ಕೈಗೆತ್ತಿಕೊಂಡು ಮಾತುಕತೆ ನಡೆಸಲಾಯಿತು.ಆ ಪೈಕಿ 22,262 ಪ್ರಕರಣಗಳಲ್ಲಿ 17,39,46,414 ರೂ. ಮೊತ್ತವನ್ನು ಇತ್ಯರ್ಥಪಡಿಸಲಾಯಿತು.ಇದರಲ್ಲಿ ಚೆಕ್ ಅಮಾನ್ಯ, ಸಿವಿಲ್ ಪ್ರಕರಣ, ಎಂಎಂಆರ್‌ಡಿ ಕಾಯ್ದೆ, ಬ್ಯಾಂಕ್ ಹಣ ವಸೂಲಾತಿ ಇತ್ಯಾದಿ ಪ್ರಕರಣಗಳು ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.