ನ.14: ಕಲ್ಲಾರೆ ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಮಾಹಿತಿ, ತಪಾಸಣಾ ಶಿಬಿರ

ಪುತ್ತೂರು: ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ಡಾ.ನಝೀರ್ ಡಯಾಬಿಟಿಸ್ ಸೆಂಟರ್ ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ  ಮಾಹಿತಿ ಮತ್ತು ತಪಾಸಣಾ ಶಿಬಿರವು ನ.14 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ.

ಮಧುಮೇಹದಿಂದ ಮುಕ್ತಿ(ಡಯಾಬಿಟಿಸ್ ರಿವರ್ಸಲ್) ಎಂಬ ವಿಷಯದ ಬಗ್ಗೆ ತಜ್ಞ ವೈದ್ಯರುಗಳು ಫಲಾನುಭವಿಗಳಿಗೆ ಮಾಹಿತಿ ನೀಡಲಿದ್ದಾರೆ. ಸಕ್ಕರೆ ಕಾಯಿಲೆಯಿಂದ ಸಂಪೂರ್ಣ ಮುಕ್ತಿ ಹೊಂದಿದವರ ಅನುಭವ ಹಂಚಿಕೆ ಮತ್ತು ಸಂವಾದ ಹಾಗೂ 25 ಜನರಿಗೆ ಉಚಿತ ಕೊಲೆಸ್ಟ್ರಾಲ್ ಮತ್ತು HBA1C ಟೆಸ್ಟ್ ಮಾಡಲಾಗುವುದು. ಫಲಾನುಭವಿಗಳು ತಮ್ಮ ಹೆಸರನ್ನು 9481451929 ನಂಬರಿಗೆ ಕರೆ ಅಥವಾ ವಾಟ್ಸಪ್ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.