ರೆಂಜ: ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿಹಬ್ಬ – ಆಮಂತ್ರಣ ಪತ್ರ ಬಿಡುಗಡೆ

ಬೆಟ್ಟಂಪಾಡಿ: ಇಲ್ಲಿನ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ 25 ನೇ ವರ್ಷದ ವಾರ್ಷಿಕೋತ್ಸವ ‘ಬೆಳ್ಳಿ ಹಬ್ಬ’ ಸಂಭ್ರಮ ದಶಂಬರ್ 22 ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರ ಬಿಡುಗಡೆ ನ. 13 ರಂದು ಮಂದಿರದ ವಠಾರದಲ್ಲಿ ನಡೆಯಿತು. ಇರ್ದೆ ವೈಷ್ಣವಿ ಜನರಲ್ ಸ್ಟೋರ್ಸ್ ಮ್ಹಾಲಕ‌ ಕಿರಣ್‌ ಕುಮಾರ್ ಆಮಂತ್ರಣ‌ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಸಮಿತಿಯ ಗೌರವ ಸಲಹೆಗಾರರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಶೇಷಪ್ಪ ರೈ ಮೂರ್ಕಾಜೆ, ದುಗ್ಗಪ್ಪ ನಾಯ್ಕ‌ ಕಜೆ, ಜಗನ್ನಾಥ ರೈ ಕೊಮ್ಮಂಡ, ಗೌರವಾಧ್ಯಕ್ಷ ಶಂಕರನಾರಾಯಣ ರಾವ್ ಪಾರ, ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ, ಕಾರ್ಯದರ್ಶಿ ರಾಜೇಶ್ ನೆಲ್ಲಿತ್ತಡ್ಕ, ಕೋಶಾಧಿಕಾರಿ ಶಿವಪ್ರಸಾದ್ ತಲೆಪ್ಪಾಡಿ, ಉಪಾಧ್ಯಕ್ಷರಾದ ದಾಮೋದರ ಕಜೆ, ಜಯರಾಮ ರೈ ಮೂರ್ಕಾಜೆ, ಶ್ರೀ ಅಯ್ಯಪ್ಪ ಭಜನಾ ಸೇವಾ ಸಮಿತಿ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಸಂಚಾಲಕ ಕೃಷ್ಣಪ್ಪ ಗೌಡ ರೆಂಜ, ಪ್ರ.‌ಕಾರ್ಯದರ್ಶಿ ರವಿನಾಥ ಕೋನಡ್ಕ, ಕೋಶಾಧಿಕಾರಿ ಅಂಕಿತ್ ಕೋನಡ್ಕ, ಅಯ್ಯಪ್ಪ ಸೇವಾ ಸಮಿತಿ ಸದಸ್ಯರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಬೆಳ್ಳಿಹಬ್ಬ ಸಮಿತಿ ಕಾರ್ಯದರ್ಶಿ ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ಕೋಶಾಧಿಕಾರಿ ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.