ಕಡಬ ವಲಯ ಮಟ್ಟದ ಕ್ರೀಡಾಕೂಟ ರಾಮಕುಂಜ ಕ.ಮಾ.ಪ್ರೌಢಶಾಲಾ ಬಾಲಕರ ವಿಭಾಗ ರನ್ನರ್ ಅಪ್

0

ರಾಮಕುಂಜ: ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಡಬ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ರನ್ನರ್ ಅಪ್ ಪಡೆದುಕೊಂಡಿದೆ.


ಶಾಲೆಯ 10ನೇ ತರಗತಿಯ ಗೌತಮ್ 3000 ಮೀಟರ್ ಮತ್ತು 1500 ಮೀಟರ್ ಓಟದಲ್ಲಿ, 10ನೇ ತರಗತಿಯ ಚೈತ್ರ ದೇವಾಡಿಗ ಎತ್ತರ ಜಿಗಿತದಲ್ಲಿ, 8ನೇ ತರಗತಿಯ ಕೃಪಾ ಉದ್ದ ಜಿಗಿತದಲ್ಲಿ, 8ನೇ ತರಗತಿಯ ಗಗನ್ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 8ನೇ ತರಗತಿಯ ಅನಿರುದ್ಧ್ 600 ಮೀಟರ್ ಮತ್ತು 400 ಮೀಟರ್ ಓಟದಲ್ಲಿ, 9ನೇ ತರಗತಿಯ ಮೊಹಮ್ಮದ್ ಅಝೀಂ ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತದಲ್ಲಿ, 8ನೇ ತರಗತಿಯ ಹರ್ಷಿತಾ 400 ಮೀಟರ್‌ನಲ್ಲಿ, 10ನೇ ತರಗತಿಯ ಶಮೀಮಾ ಬಾನು ಜಾವೆಲಿನ್ ತ್ರೋದಲ್ಲಿ ಹಾಗೂ ಹುಡುಗರ ವಿಭಾಗದ ರಿಲೇ ಓಟದಲ್ಲಿ 9ನೇ ತರಗತಿಯ ಕಾರ್ತಿಕ್, ಹಿತೇಶ್, ಪ್ರೀತಂ ಮತ್ತು ಮೊಹಮ್ಮದ್ ಅಝೀಂರವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 10ನೇ ತರಗತಿಯ ಚಂದನ್ 800 ಮೀಟರ್ ಓಟದಲ್ಲಿ, 10ನೇ ತರಗತಿಯ ಚೈತಿಕಾ ಗುಂಡು ಎಸೆತದಲ್ಲಿ ಹಾಗೂ ಹುಡುಗಿಯರ ವಿಭಾಗದ ರಿಲೇ ಒಟದಲ್ಲಿ ೮ನೇ ತರಗತಿಯ ಹರ್ಷಿತಾ, ಶರಣ್ಯ, ಕೃಪಾ, ಸಾನ್ವಿಯವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here