ನಿಡ್ಪಳ್ಳಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ ಆಚರಿಸಲಾಯಿತು. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕರುಣಾಕರ ರೈ ಮುಂಡೂರು, ಉಪಾಧ್ಯಕ್ಷೆ ಶಾಲಿನಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹೇಮಾ, ಸಹಶಿಕ್ಷಕಿ ಪುಷ್ಪ ಕೆ.ಆರ್, ಶಾಲಾ ನಾಯಕಿ ತೃಶಾ ಅಧ್ಯಕ್ಷೆ, ಉಪ ನಾಯಕ  ರಾಕೇಶ್, ಗೃಹ ಮಂತ್ರಿ ತ್ರಿಶಾಂತ್, ಶಿಸ್ತು ಮಂತ್ರಿ ತರುಣ್ ಉಪಸ್ಥಿತರಿದ್ದರು.
ಮಕ್ಕಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪ್ರಭು ಹಾಗೂ ಶಿಕ್ಷಕಿಯರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಏಳನೆ ತರಗತಿ ವಿದ್ಯಾರ್ಥಿನಿ ಫಾತಿಮತ್ ತುಫೈಲಾ ಸ್ವಾಗತಿಸಿ, ಏಳನೇ ತರಗತಿಯ ದೀಕ್ಷಿತಾ.ಜಿ ವಂದಿಸಿದರು. ಏಳನೇ ತರಗತಿಯ ಸಾಕ್ಷ್ಯ ಬಹುಮಾನದ ಪಟ್ಟಿ ವಾಚಿಸಿದರು. ಏಳನೇ ತರಗತಿಯ ಆಯಿಷತ್ ಸ್ವಾಲಿಹ ಕಾರ್ಯಕ್ರಮ ನಿರೂಪಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಅತಿಥಿ ಶಿಕ್ಷಕಿ ಸುಮ.ಡಿ, ಜ್ಞಾನ ದೀಪ ಶಿಕ್ಷಕಿ ಕುಸುಮ.ಸಿ.ಎಚ್, ಗೌರವ ಶಿಕ್ಷಕಿ ಪವಿತ್ರ.ಜಿ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.