ಪುತ್ತೂರು ಪುರಭವನದಲ್ಲಿ ಭಾರತೀಯ ರೆಡ್ ಕ್ರಾಸ್, ರೋಟರಿ ಕ್ಲಬ್ ಸೆ೦ಟ್ರಲ್ ನಿಂದ ಉಚಿತ ಮಧುಮೇಹ, ಮೂಳೆಸಾಂದ್ರತೆ, ರಕ್ತದೊತ್ತಡ ತಪಾಸಣಾ ಶಿಬಿರ

ಪುತ್ತೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನ ಸ೦ಯುಕ್ತ ಆಶ್ರಯದಲ್ಲಿ, ಚೇತನಾ ಆಸ್ಪತ್ರೆ ಪುತ್ತೂರು, ಪುತ್ತೂರು ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ, ಡಾ. ರೆಡ್ದೀಸ್ ಲ್ಯಾಬೋರೇಟರಿ, ಮೈಕ್ರೋ ಲ್ಯಾಬ್ ಲಿಮಿಟೆಡ್-ಡಿವಿಶನ್, ಲೋಯ್ಡ್ ಹೆಲ್ತ್ ಕೇರ್ ಪ್ರೈ.ಲಿಮಿಟೆಡ್ ಓಪ್ಟಿಮಾಸ್ ಡಿವಿಷನ್, ಕರ್ಶ್ಯೊನ್ -2 ಡಾ ರೆಡ್ದೀಸ್ ಲ್ಯಾಬೊರೇಟರಿ, ಇಂಡಿಗ್ರೇಜ್ ಫಾರ್ಮಾ.ಲಿಮಿಟೆಡ್(BMS) ಸಹಯೋಗದಲ್ಲಿ ಪುತ್ತೂರು ನಗರಸಭೆಯ ಸಹಕಾರದಲ್ಲಿ ಪುರಭವನದಲ್ಲಿ ಜಾಗತಿಕ ಮಧುಮೇಹ ದಿನದ ಪ್ರಯುಕ್ತ ಉಚಿತ ರಕ್ತದೊತ್ತಡ, ಮೂಳೆ ಸಾಂದ್ರತೆ, ಮಧುಮೇಹ ತಪಾಸಣಾ ಕಾರ್ಯ ಬೆಳಿಗ್ಗೆ 9ರಿಂದ ಮಧ್ಯಾಹ್ನದವರೆಗೆ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಚೇತನಾ ಆಸ್ಪತ್ರೆಯ ಡಾ.ಜೆ.ಸಿ ಅಡಿಗರವರು ಮಾತನಾಡಿ, ಮಧುಮೇಹಿಗಳು ಸಕ್ಕರೆಯ ಅಂಶವನ್ನು ಕಾಲಕಾಲಕ್ಕೆ ಪರೀಕ್ಷಿಸಿಕೊಂಡು ಸೂಕ್ತ ವೈದ್ಯಕೀಯ ಮಾರ್ಗದರ್ಶನವನ್ನು ಪಡೆಯುತ್ತಾ ದ್ವಿದಳ ಧಾನ್ಯವನ್ನು ಹೆಚ್ಚು ಸೇವಿಸುವ ಮೂಲಕ ಏಕದಳ ಧಾನ್ಯಗಳನ್ನ ಕಡಿಮೆಗೊಳಿಸಿ ದೇಹದ ತೂಕವನ್ನು ಪರೀಕ್ಷಿಸುತ್ತಿರಬೇಕು. ಬಾಡಿ ಮಾಸ್ ಇಂಡಕ್ಸ್ ಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು, ದೈಹಿಕ ಶ್ರಮ ಇಲ್ಲದೆ ಕೆಲಸ ನಿರ್ವಹಿಸುವವರು ವ್ಯಾಯಾಮ ಹೆಚ್ಚಿಸಬೇಕು, ಆಹಾರದಲ್ಲಿ ಸಕ್ಕರೆ ಉಪ್ಪು ಎಣ್ಣೆ ಕಡಿಮೆಗೊಳಿಸಿರಿ, ಜಂಕ್ ಫ಼ುಡ್‌ ಸೇವಿಸದೇ ಇರುವುದು, ಹಣ್ಣು ತರಕಾರಿ ಪ್ರೋಟೀನ್ ಯುಕ್ತ ಆಹಾರವನ್ನ ಸೇವಿಸಬೇಕು,ಆಲ್ಕೋಹಾಲ್ ತಂಬಾಕುಗಳಿಂದ ದೂರ ಉಳಿಯಬೇಕು ಎಂದರು.

ಕಾರ್ಯಕ್ರಮಕ್ಕೆ ನಗರಸಭೆಯ ಆಯುಕ್ತರಾದ ಮಧು ಎಸ್ ಮನೋಹರ್ ರವರು ಶುಭಹಾರೈಸಿದರು, ನಗರಸಭೆಯ ಸ್ಟಾಪ್ , ನೂರಕ್ಕಿಂತಲೂ ಹೆಚ್ಚು ಜನರು ಕಾರ್ಯಕ್ರಮದ ಸದುಪಯೋಗವನ್ನು ಪಡೆದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಭಾಪತಿ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಆಸ್ಕರ್ ಆನಂದ್, ರೋಟರಿ ಕ್ಲಬ್ ಸೆ೦ಟ್ರಲ್ ಅಧ್ಯರಾದ ರಫೀಕ್ ದರ್ಬೆ, ಉಪಾದ್ಯಕ್ಷ ಅಶೋಕ್ ನಾಯ್ಕ್, ಕಾರ್ಯಕ್ರಮದ ಉಪಸಮಿತಿ ಮುಖ್ಯಸ್ತರಾದ ಪಾಟ್ರಿಕ್ ಸಿಪ್ರಿಯನ್ ಮಸ್ಕೇರೆನ್ಹಸ್, ಪುತ್ತೂರು ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯ ನೋಯಲ್ ಡಿ ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ಲಬ್ ಗೆ ನಿರಂತರ ಸಹಕಾರ ನೀಡುತ್ತಿರುವ ನೋಯಲ್ ಡಿ’ಸೋಜಾರವರನ್ನು ಗೌರವಿಸಲಾಯಿತು. ಲೊಯ್ಡ್ ಹೆಲ್ತ್ ಕೇರ್ ನ ಶಿವಪ್ರಸಾದ್, ಡಾ. ರೆಡ್ಡಿಸ್ ಲ್ಯಾಬೋರೆಟರಿಯ ಪುನೀತ್ ಮತ್ತು ಪುತ್ತೂರು ಡಯೋಗ್ನಾಸ್ಟಿಕ್ ಲ್ಯಾಬೋರೇಟರಿಯ ಮೀನಾಕ್ಷಿ ಮಧುಮೇಹ ಪರೀಕ್ಷೆಯನ್ನು ಇಂಡಿಗ್ರೇಜ್ ಫಾರ್ಮ ಲಿಮಿಟೆಡ್ ನ ದೀಪಕ್ ಬೊನ್ ಮಾಸ್ ಡೆನ್ಸಿಟಿ ಪರೀಕ್ಷೆಯನ್ನು, ಅಲೆಂಬಿಕ್ ನ ಜಗದೀಶ್ ಹಿಮೋಗ್ಲೋಬಿನ ಪರೀಕ್ಷೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ರೋಟರಿ ಸೆ೦ಟ್ರಲ್ ನ ನಿಕಟಪೂರ್ವ ಅಧ್ಯಕ್ಷ ನವೀನ್ ಚಂದ್ರ ನಾಯ್ಕ್, ಪುರುಷೋತ್ತಮ್ ಶೆಟ್ಟಿ, ಶಾಂತ ಕುಮಾರ್, ಪ್ರದೀಪ್ ಬೊಳ್ವಾರ್, ಅಮಿತಾ ಶೆಟ್ಟಿ, ಜಯಪ್ರಕಾಶ್ ಅಮೈ, ಆಬ್ದುಲ್ ಖಾದರ್ ಹಾಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.