ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ವತಿಯಿಂದ ರಕ್ತದಾನ ಶಿಬಿರ

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವದ ಶತಸಂಭ್ರಮದ ಅಂಗವಾಗಿ ರೋಟರೀ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಸಹಯೋಗದಲ್ಲಿ ರಕ್ತದಾನ ಶಿಬಿರವು ದರ್ಬೆಯ ಸಚ್ಚಿದಾನಂದ ಸೇವಾ ಸದನ ದಲ್ಲಿ ನಡೆಯಿತು.

ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರಕ್ತದಾನ ಶಿಬಿರ ಉದ್ಘಾಟಿಸಿ ರಕ್ತದಾನ ಮಹತ್ತರ ಕಾರ್ಯ, ಇಂತಹ ಶಿಬಿರಗಳು ರಕ್ತದಾನದ ಕುರಿತು ಜಾಗೃತಿ ಮೂಡಿಸಲು ನೆರವಾಗುತ್ತದೆ. ಇಂತಹ ಸಮಾಜ ಉಪಯೋಗಿ ಕಾರ್ಯಕ್ರಮಗಳಲ್ಲಿ ಸಾರಸ್ವತ ಸಂಘ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು .

ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ ಅಧ್ಯಕ್ಷತೆ ವಹಿಸಿದ್ದರು. ರೋಟರೀ ಕ್ಯಾಂಪ್ಕೊ ಬ್ಲಡ್ ಸೆಂಟರ್ ನ ರಾಮಚಂದ್ರ ಭಟ್, ಸಂಘದ ಕೋಶಾಧಿಕಾರಿ ರಮೇಶ್ ಪ್ರಭು, ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಮಲ್ಲಿಕಾ ಕುಕ್ಕಾಡಿ, ನಿರ್ದೇಶಕರಾದ ನಾರಾಯಣ ನಾಯಕ್, ವಿಷ್ಣುಪ್ರಭು, ಚಂದ್ರಶೇಖರ ನಾಯಕ್, ಬಿ.ಆರ್ ಶುಭಕರ ರಾವ್, ದೇವಕಿ ಸಂಟ್ಯಾರು, ಸರಸ್ವತಿ ಮಹಿಳಾ ಮಂಡಳಿ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ ಸ್ವಾಗತಿಸಿ, ಪ್ರಸ್ತಾವಿಸಿದರು. ರಮೇಶ್ ಪ್ರಭು ವಂದಿಸಿದರು. ಮೂಲಚಂದ್ರ ಕಾಂಚನ‌ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.