ಯಶಸ್ವೀ ಶಸ್ತ್ರ ಚಿಕಿತ್ಸೆ-ತುಂಡಾದ ಕೈ ಮರುಜೋಡಣೆ ; ಹಾಸನದ ಜನಪ್ರಿಯ ಆಸ್ಪತ್ರೆಯ ಡಾ. ಅಬ್ದುಲ್ ಬಶೀರ್ ತಂಡದ ಸಾಧನೆ

0

ವಿಟ್ಲ: ಸಂಪೂರ್ಣ ತುಂಡಾಗಿ ಹೋಗಿದ್ದ ಕೈಯನ್ನು ಯಶಸ್ವಿಯಾಗಿ ಮರುಜೋಡಣೆಗೊಳಿಸಿ ಹಾಸನದ ವೈದ್ಯರ ತಂಡ ಶ್ಲಾಘನೆಗೆ ಒಳಗಾಗಿದೆ. ತೆಂಗಿನ ನಾರು ತೆಗೆಯುವ ಯಂತ್ರಕ್ಕೆ ಸಿಲುಕಿ ಜಜ್ಜಿ ತುಂಡಾಗಿ ಬೇರ್ಪಟ್ಟಿದ್ದ ಯುವಕನ ಬಲಗೈಯನ್ನು ಹಾಸನ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ, ಮೂಲತಃ ಕಂಬಳಬೆಟ್ಟುವಿನ ಡಾ. ಅಬ್ದುಲ್ ಬಶೀರ್ ವಿ.ಕೆ. ರವರ ನೇತೃತ್ವದಲ್ಲಿ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರ  ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮರುಜೋಡಣೆ ಮಾಡಿದೆ.

ಉತ್ತರ ಕರ್ನಾಟಕ ಮೂಲದ ಮನೀಶ್(19 ವ.)ರವರು ಅರಸೀಕೆರೆ ತಾಲೂಕು ಗಂಡಸಿಬಾಗೇಶಪುರ ವ್ಯಾಪ್ತಿಯಲ್ಲಿ ತೆಂಗಿನ ನಾರು ತೆಗೆಯುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರು. ನ.2ರಂದು ಯಂತ್ರಕ್ಕೆ ಸಿಲುಕಿ ಮನೀಶ್ ರವರ ಕೈ ಜಜ್ಜಿ ತುಂಡಾಗಿ ನೇತಾಡುತ್ತಿತ್ತು. ಕೂಡಲೇ ಸ್ಥಳೀಯರು ಅವರನ್ನು ಹಾಸನದ ಜನಪ್ರಿಯ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಮನೀಶ್ ರವರು ತೀವ್ರ ರಕ್ತಸ್ರಾವಕ್ಕೊಳಗಾಗಿ ರಕ್ತದ ಒತ್ತಡ ತುಂಬಾ ಕಡಿಮೆ ಇದ್ದುದರಿಂದ ಹೃದಯಕ್ಕೆ ಕೃತಕವಾಗಿ ರಕ್ತ ಪೂರೈಸಿ ಜೀವ ಉಳಿಸಲಾಯಿತು. ಸ್ಕ್ಯಾನಿಂಗ್ ನಂತರ 7 ರಿಂದ 8 ಗಂಟೆಗಳ ಕಾಲ ಹಾಸನದ ಜನಪ್ರಿಯ ಆಸ್ಪತ್ರೆಯ ವೈದ್ಯರಾದ ಕಂಬಳಬೆಟ್ಟು ನಿವಾಸಿ ಡಾ.ಅಬ್ದುಲ್ ಬಶೀರ್ ವಿ.ಕೆ.ರವರ ನೇತೃತ್ವದಲ್ಲಿ ಕೀಳು ಮತ್ತು ಮೂಳೆ ಶಸ್ತ್ರ ಚಿಕಿತ್ಸೆ ಹಾಗೂ ಕೀಲು ಬದಲಾವಣೆ ತಜ್ಞರಾದ ಡಾ. ರಜತ್ ಎಸ್.ಒ., ಅರಿವಳಿಕೆ ತಜ್ಞ ಡಾ. ಲಿಂಗರಾಜು, ಸರ್ಜನ್ ಡಾ. ಪ್ರವೀಣ್ ಮತ್ತು ಡಾ. ಲೋಹಿತ್, ಡಾ. ಚೈತನ್ಯರವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರ ಚಿಕಿತ್ಸೆಯ ನಂತರ ರಕ್ತನಾಳ ಸ್ಕ್ಯಾನಿಂಗ್ ನಡೆಸಿ ಅದರಲ್ಲಿ ರಕ್ತ ಚಲನೆ ಕಂಡು ಬಂದು 6 ಗಂಟೆ ನಂತರ ಗಾಯಾಳುವಿನ ಕೈ ಬೆರಳುಗಳು ಅಲ್ಲಾಡಲು ಶುರು ಮಾಡಿದವು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕಡಿಮೆ ವೆಚ್ಚದಲ್ಲಾದ ಶಸಚಿಕಿತ್ಸೆ

ಕೈ ಮರುಜೋಡಣೆ ಶಸಚಿಕಿತ್ಸೆಗೆ ವೈದ್ಯರಿಗೆ ಸುಮಾರು 8 ತಾಸುಗಳೇ ಹಿಡಿದಿದ್ದವು. ರಕ್ತದೊತ್ತಡದಿಂದ ರೋಗಿಯನ್ನು ಬದುಕಿಸುವ ಜೊತೆಜೊತೆಗೆ ತುಂಡಾದ ಕೈ ಮರುಜೋಡಣೆಯ ದೃಢ ನಿರ್ಧಾರವನ್ನು ತೆಗೆದುಕೊಂಡ ವೈದ್ಯರ ತಂಡ ತಮ್ಮ ಕಾರ್ಯದಲ್ಲಿ ಸಫಲತೆ ಕಂಡರು. ಬೇರೆ ಆಸ್ಪತ್ರೆಗಳಲ್ಲಿ ರೂ. 5 ಲಕ್ಷಕ್ಕಿಂತ ಅಧಿಕ ಖರ್ಚಾಗಬಹುದಾಗಿದ್ದ ಈ ಶಸಚಿಕಿತ್ಸೆ ಜನಪ್ರಿಯ ಆಸ್ಪತ್ರೆಯಲ್ಲಿ ಕೇವಲ 90 ಸಾವಿರ ರೂಪಾಯಿಗಳಲ್ಲಿ ಆಗಿದೆ ಎನ್ನುತ್ತಾರೆ ವೈದ್ಯರ ತಂಡ.


ನಮ್ಮ ಹಾಸನದ ಜನಪ್ರಿಯ ಆಸ್ಪತ್ರೆ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಮತ್ತೊಂದು ದಾಖಲೆ ಮಾಡಿದೆ ಎನ್ನುವ ವಿಚಾರ ನಮಗೆ ಬಹಳಷ್ಟು ಸಂತಸ ತಂದಿದೆ.

ಮನೀಶ್ ಶೀಘ್ರ ಗುಣಮುಖನಾಗಲಿದ್ದು, 3 ತಿಂಗಳ ನಂತರ ಎಂದಿನಂತೆ ಕೆಲಸದಲ್ಲಿ ತೊಡಗಬಹುದು. ಯಾರೇ ಆಗಲಿ ದೇಹದ ಯಾವುದೇ ಭಾಗಗಳಿಗೆ ಗಾಯ ಆದ ಕೂಡಲೇ ಆಸ್ಪತ್ರೆಗೆ ಧಾವಿಸಿದರೆ ರಕ್ತಸ್ರಾವ ನಿಲ್ಲಿಸಿ ಗುಣ ಪಡಿಸಬಹುದು. ಜನಪ್ರಿಯ ಆಸ್ಪತ್ರೆ ಯಶಸ್ವಿ 8 ವರ್ಷ ಪೂರೈಸಿ, 9 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲಾ ರೀತಿಯ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆಯ ಬೆಳವಣಿಗೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಎಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ.

ಡಾ. ಅಬ್ದುಲ್ ಬಶೀರ್ ವಿ.ಕೆ.
ಚೇರ್ ಮ್ಯಾನ್. ಜನಪ್ರಿಯ ಫೌಂಡೇಶನ್ ಹಾಸನ

LEAVE A REPLY

Please enter your comment!
Please enter your name here