ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಕೆಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಾಟ  ಸಮಾರೋಪ ಸಮಾರಂಭ, ಸನ್ಮಾನ

ಕೆಯ್ಯೂರು;  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಇದರ ವತಿಯಿಂದ ನಡೆದ ಕೆಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ನ.12 ರಂದು ಕೆ.ಪಿ.ಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛ ಉಪಾಧ್ಯಕ್ಷ ಸಹಜ್ ರೈ ಬಳಜ್ಜ ವಹಿಸಿ ಯಾವುದೇ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಮಣ್ಣು ಕೆಯ್ಯೂರು. ಕ್ರೀಡೆಗಳಲ್ಲಿ ಸೋಲು ಗೆಲುವು ವಿಶೇಷವಲ್ಲ ಭಾಗವಹಿಸುವಿಕೆ ಮುಖ್ಯ. ಅದನ್ನು ಸಮಾನಾಗಿ ಸ್ವೀಕರಿಸಿ, ಯುವಕರು ಕ್ರಿಕೆಟ್ ನ ಉತ್ತುಂಗಕ್ಕೆ ಬೆಳೆದು ಬಾವೈಕ್ಯತೆಯ ಸಂಕೇತದಿಂದ ಸೋದರತೆಯನ್ನು ಬೆಳೆಸಿಕೊಳ್ಳಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ.ಅದ್ಯಕ್ಷೆ ಜಯಂತಿ ಎಸ್ ಭಂಡಾರಿ, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಗೌರವ ಸಲಹೆಗಾರ ಸದಾಶಿವ ಭಟ್ ಅರ್ತ್ಯಡ್ಕ, ವಕೀಲ ಕೃಷ್ಣ ಪ್ರಸಾದ್ ರೈ ಕಣಿಯಾರು ಉಪಸ್ಥಿತರಿದ್ದರು. ಗೌರವ ಉಪಸ್ಥಿತಿಯಲ್ಲಿ  ಶ್ರೀ ದುರ್ಗಾ ಯುವಕ ಮಂಡಲ ಮಾಜಿ ಅಧ್ಯಕ್ಷ ಚಂದ್ರಶೇಖರ ರೈ ಇಳಾಂತಜೆ,  ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ಕೆಯ್ಯೂರು ಗ್ರಾ.ಪಂ.ಕಾರ್ಯದರ್ಶಿ ಸುರೇಂದ್ರ ರೈ ಇಳಾಂತಜೆ, ಕೆಯ್ಯೂರು ಕಂದಾಯ ಇಲಾಖೆ ಗ್ರಾಮ ಸಹಾಯಕ ನಾರಾಯಣ ಪಾಟಾಳಿ ದೇರ್ಲ, ಕೆಯ್ಯೂರು ಹಾ.ಉ.ಸ.ಸಂಘದ ನಿವೃತ್ತ ಕಾರ್ಯದರ್ಶಿ ಚಂದ್ರಹಾಸ ರೈ ಬೊಳಿಕ್ಕಲ, ಉದ್ಯಮಿಗಳಾದ  ಸವಿನ್ ಗೌಡ, ನೇರೋಳ್ತಡ್ಕ, ಚಂದ್ರಶೇಖರ ರೈ ಸಣಂಗಳ, ರಮಾನಾಥ ರೈ ಕೊಡಂಬು, ಸದಾನಂದ ಗೌಡ ಮುರುಬಾಗಿಲು, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಮಾಜಿ ಅದ್ಯಕ್ಷ ಗಣೇಶ್ ಪ್ರಸಾದ್ ಸಾಮಾನಿ, ಮಹಮ್ಮದ್ ಪಿ.ವೈ,  ಇಸ್ಮಾಯಿಲ್ ನ್ಯೂ ಗೆಮ್ಸ್ ಮಾಡಾವು, ದಾಮೋದರ ಪುಜಾರಿ ಕೆಂಗುಡೇಲು, ರಮೇಶ್ ರೈ ತಿಂಗಳಾಡಿ ಪಂದ್ಯಾಟಕ್ಕೆ ಶುಭ ಹಾರೈಸಿದರು.
ಶ್ರೀ ದುರ್ಗಾ ಕಣಿಯಾರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಯೋಗಪಟು ತೃಪ್ತಿ ಎನ್ ರವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.  ಪಂದ್ಯಾಟದ ಪ್ರಯೋಜಕರು, ಸ್ಮರಣಿಕೆಗಳ ಪ್ರಯೋಜಕರು, ಬ್ಯಾಂಡ್ ಸೆಟ್ ಪ್ರಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಂದ್ಯಾಟದಲ್ಲಿ ಉತ್ತಮ ಗೂಟ ರಕ್ಷಕ ರಪೀಕ್ ಅರಿಕ್ಕಿಲ, ಸರಣಿಶ್ರೇಷ್ಠ ಶಕ್ರು ಮೇರ್ಲ, ಉತ್ತಮ ದಾಂಡಿಗ ಶಪೀಕ್ ಮಾಡಾವು, ಉತ್ತಮ ಎಸೆತಗಾರ ಅಶ್ವಥ್ ಕಣಿಯಾರು ಪಡೆದು ಕೊಂಡರು. ಪಂದ್ಯಾಟದ ಶಿಸ್ತಿನ ತಂಡವು ಬಿ.ಎನ್ ವಾರಿಯರ್ಸ್ ಪಡೆದು ಕೊಂಡಿತು.  8 ಟೀಮ್ ಗಳ ಪೈಕಿ ಹೆಚ್ಚು ಮತ ಗಳಿಸಿದ ಟೀಮ್ ವಾಸುಕೀ ಅರೇಂಜರ್ಸ್ ಪ್ರಥಮ ಸ್ಥಾನ ಪಡೆಯಿತು.
ಪಂದ್ಯಾಟದ ಪ್ರಥಮ ಬಹುಮಾನ ಶ್ರೀ ದುರ್ಗಾ ಕಣಿಯಾರು 20,000ರೂ ಮತ್ತು ಟ್ರೋಫಿ, ದ್ವೀತಿಯ ಸ್ಥಾನ ವಾಸುಕೀ ಅರೇಂಜರ್ಸ್ 15,000 ರೂ ಮತ್ತು ಟ್ರೋಪಿ, ತೃತೀಯ ಸ್ಥಾನ ಅಭಿನವ್ ಮಾಡಾವು 5,000 ರೂ. ಟ್ರೋಫಿ, ಚತುರ್ಥ ಸ್ಥಾನ ಯುನೈಟೆಡ್ ಸಂತೋಷ್ ನಗರ 4,000 ರೂ. ಮತ್ತು ಟ್ರೋಫಿ ಪಡೆದು ಕೊಂಡರು. 
ವಾಸುಕೀ ಅರೇಂಜರ್ಸ್
ತಿರುವು ಪಡೆದುಕೊಂಡ ರೋಚಕ ಟೈ ಪಂದ್ಯಾಟ
ಕೊನೆಯ ಒವರನಲ್ಲಿ  ವಾಸುಕೀ ಅರೇಂಜರ್ಸ್ ತಂಡಕ್ಕೆ ಗೆಲ್ಲಲು 9 ರನ್ ಗಳ ಗುರಿಯಿತ್ತು, ಆದರೆ ಬ್ಯಾಂಟಿಂಗ್ ನಡೆಸಿದ ವಾಸುಕೀ ಅರೆಂಜರ್ಸ್ ತಂಡವು 8ರನ್ ಗಳಿಸುವಲ್ಲಿ ಶಕ್ತವಾಯಿತು.ಇದರಿಂದ ಪಂದ್ಯಾಟವು ಟೈ ಗೊಂಡಿತು. ನಂತರ ನಾಣ್ಯ ಚಿಮ್ಮುವ ಮೂಲಕ ಶ್ರೀ ದುರ್ಗಾ ಕಣಿಯಾರು ಪ್ರಥಮ ಸ್ಥಾನ ಪಡೆದು ವಿಜಯ ಶಾಲಿಯಾದರು.
ಅಭಿನವ್ ಮಾಡಾವು
ಯುನೈಟೆಡ್ ಸಂತೋಷ್ ನಗರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.