ಕೆಮ್ಮಾರ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

0

ಕೆಮ್ಮಾರ: ಇಲ್ಲಿನ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ವಿದ್ಯಾರ್ಥಿ ನಾಯಕ ಮೊಹಮ್ಮದ್ ಫಝಲ್ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಮೊಹಮ್ಮದ್ ಅನಸ್, ಗೃಹಮಂತ್ರಿ ಝಬೇರ್ ಖಾನ್, ಶಿಕ್ಷಣ ಮಂತ್ರಿ ಇನಾಮ್, ವಿರೋಧ ಪಕ್ಷದ ನಾಯಕ ಫಾಸಿಲ್, ಸಾಂಸ್ಕೃತಿಕ ಮಂತ್ರಿ ಮಿಶ್ರೀಯ, ಆರೋಗ್ಯಮಂತ್ರಿ ಸನ, ತೋಟಗಾರಿಕಾ ಮಂತ್ರಿ ಸಮ್ಮಾಸ್, ಸೆಲ್ವಾ ಫಾತಿಮಾ, ರಾಹಿಲ್, ಅನ್ಸಾರ್, ಮುಝೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಂ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ. ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರುಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರು ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಸಿದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಮ್ಮದ್ ಅನಸ್ ಸ್ವಾಗತಿಸಿದರು, ಮಹಮ್ಮದ್ ಸಮ್ಮಾಸ್ ವಂದಿಸಿದರು. ಸಾಂಸ್ಕೃತಿಕ ಮಂತ್ರಿ ಮಿಶ್ರೀಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here