ಹೃನ್ಮನ ಸೆಳೆಯಿತು ವೀರಮಂಗಲ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ

ಪುತ್ತೂರು : ಮಕ್ಕಳ ದಿನಾಚರಣೆ ಎಂದರೆ ಮಕ್ಕಳಿಗೆ ಹಬ್ಬ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವುದು ರೂಢಿ. ಆ ದಿನ ಮಕ್ಕಳ ಪ್ರತಿಭೆಗಳಿಗೆ ಪುರಸ್ಕಾರ ಹಾಗೂ ವಿವಿಧ ಚಟುವಟಿಕೆಗಳನ್ನು ಮಾಡಲಾಗುತ್ತದೆ.

ವೈವಿಧ್ಯಮಯ ಚಟುವಟಿಕೆಗಳ ಮೂಲಕ ಮಕ್ಕಳು ತಮ್ಮನ್ನು ತೊಡಗಿಸಿಕೊಂಡು ತಮ್ಮ ಆಟ ಪಾಠಗಳನ್ನು ಪ್ರದರ್ಶಿಸಿ ಸವಿಯಾದ ಸಮಯವನ್ನು ಕಳೆಯುತ್ತಾರೆ. ಇದಕ್ಕೆ ಪೂರಕವಾಗುವಂತೆ ವೀರಮಂಗಲ ಶಾಲೆಯಲ್ಲಿ ಹೃನ್ಮನ ಸೆಳೆಯಿತು ವಿಭಿನ್ನ ರೀತಿಯ ಮಕ್ಕಳ ದಿನಾಚರಣೆ. ಏಕಕಾಲದಲ್ಲಿ 155 ಹಣತೆಗಳ ಪ್ರಜ್ವಲನೆ, ಸಾಮೂಹಿಕ ಹುಟ್ಟುಹಬ್ಬ ಆಚರಣೆ, ಚಾಚಾ ನೆಹರುರವರ ಭಾವಚಿತ್ರಕ್ಕೆ ಪ್ಪುಷ್ಪಾರ್ಚನೆ, ಮಕ್ಕಳಿಂದ ಪುಟ್ಟ ಪುಟ್ಟ ಭಾಷಣ, ಹಿರಿಯರು, ಪೋಷಕರಿಂದ ಮಕ್ಕಳ ದಿನಾಚರಣೆಯ ಕುರಿತಾದ ಮಾತುಕತೆ ಒಂದು ಕಡೆಯಾದರೆ ಇನ್ನೊಂದು ಕಡೆ ಮಕ್ಕಳ ಚಟುವಟಿಕೆ ನೆಟ್ಟಿಗರ ಮನಸೆಳೆಯಿತು.

ವಿಶೇಷವಾಗಿ ರೂಪಿಸಲಾದ ಆಹಾರಮೇಳ, ಮಕ್ಕಳೇ ತಯಾರಿಸಿದ ಬೆಂಕಿ ಇಲ್ಲದ ಅಡುಗೆ! ರುಚಿ ಸವಿದ ಮಕ್ಕಳು, ಪೋಷಕರು

ಚರುಂಬುರಿ, ಪಂಚಾಮೃತ , ಕೋಸಂಬರಿ ಎಂತಹ ರುಚಿ..

ಪಕ್ಕದಲ್ಲಿ ಇತ್ತು ಮೆಟ್ರಿಕ್ ಮೇಳ ಅದ್ಭುತವಾದ ಪರಿಕಲ್ಪನೆಯ ವ್ಯಾಪಾರ ಮೇಳ. ಮಕ್ಕಳ ಪೋಷಕರು ತಮ್ಮ ಮಕ್ಕಳಿಂದಲೇ ಸಾಮಾಗ್ರಿ ಖರೀದಿಸಿದ ಅನುಭವ. ಲಾಭ ನಷ್ಟಗಳ ಲೆಕ್ಕಾಚಾರ. ಮೊಳ, ಅಳತೆ, ಲೀಟರ್, ಮೀಟರ್, ತೂಕ, ಹಣದ ಲೆಕ್ಕಾಚಾರ, ಶೇಕಡಾ, ರಿಯಾಯಿತಿ, ದರ ನಿರ್ಧಾರ ಹಣದ ಲೆಕ್ಕಾಚಾರ ಎಲ್ಲವು ಗಣಿತದ ಪರಿಕಲ್ಪನೆ. ವಿದ್ಯಾರ್ಥಿಗಳೇ ಲೆಕ್ಕ ಮಾಡಿ ಚಿಲ್ಲರೆ ಕೊಡುವುದು. ವ್ಯಾಪಾರ ಮಾಡುವುದು, ಜಾಹಿರಾತು ನೀಡುವುದು, ಅಬ್ಬಬ್ಬ ನಮ್ಮ ಮಕ್ಕಳು ಗಣಿತವನ್ನು ಹೊರ ಪ್ರಪಂಚಕ್ಕೆ ಸೇತುವೆಯನ್ನಾಗಿ ಮಾಡಿರುವುದು ಕಂಡುಬಂತು. ಹೌದು! ಗಣಿತ ಎಂದರೆ ಹಾಗೆ ಅದು ತರಗತಿ ಕೊನೆಯಿಂದ ವಾಸ್ತವಕ್ಕೆ ಸೇತು ನಿರ್ಮಿಸಬೇಕು ಪುಸ್ತಕದಲ್ಲಿ ಬಂದಂತಹ ವಿಚಾರಗಳು ನಿತ್ಯ ಜೀವನದಲ್ಲಿ ಅಳವಡಿಕೆಯಾದಾಗ ಮಾತ್ರ ಕಲಿಕೆ ಉಂಟಾಗುತ್ತದೆ ಮೂಲಭೂತ ಚಟುವಟಿಕೆಗಳನ್ನು ಗಣಿತದ ಮೂಲ ಕ್ರಿಯೆಗಳು ಅತ್ಯಂತ ಅಗತ್ಯವಾಗಿದೆ. ಈ ನಿಟ್ಡಿನಲ್ಲಿ ವೀರಮಂಗಲ ಶಾಲಾಮಕ್ಕಳು ತಮ್ಮ ಕಾರ್ಯ ವೈಖರಿಯನ್ನು ತೋರಿಸಿದರು.

ಐಕೆ ಬೊಳುವಾರು ನಿರ್ದೇಶನದ ಶ್ರೀರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ ಶಾಕುಂತಲ ನಾಟಕ ಮನಸೂರೆಗೊಂಡಿತು. ಸಂಗೀತದಲ್ಲಿ ತಾವೇನು ಕಡಿಮೆ ಇಲ್ಲ ಎಂದು ವೀರಮಂಗಲ ಶಾಲಾ ಚಿಣ್ಣರು ತೋರಿಸಿಕೊಟ್ಟರು.

ಸೃಜನಶೀಲ ಕಸೂತಿ ಮೇಳ:ಕಸೂತಿ ಮೇಳದಲ್ಲಿ ಮಕ್ಕಳು ಮೆಹಂದಿ ಹಾಕುವುದು ಜಡೆ ಹೆಣೆಯುವುದು ಹಾಗೂ ರಂಗೋಲಿ ಹಾಕುವುದರಲ್ಲಿ ನಿರತರಾದರು. ತಾವು ಕಲಿತು ಇನ್ನೊಬ್ಬರಿಗೆ ಕಲಿಸಿದರು ಇಡೀ ದಿನ ವೈವಿದ್ಯಮಯ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ರೂಪಿಸಲಾದ ಮಕ್ಕಳ ದಿನಾಚರಣೆಯು ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಪರಿಕಲ್ಪನೆಯಲ್ಲಿ ಮೂಡಿ ಬಂತು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಗಾಯತ್ರಿ, ಕವಿತಾ, ಶ್ರೀಲತಾ, ಹೇಮಲತಾ ರವರು ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಸಹಕರಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ, ಉಪಾಧ್ಯಕ್ಷ ರಜಾಕ್ ಸೇರಿದಂತೆ ಎಲ್ಲಾ ಪೋಷಕ ವೃಂದ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಹಕರಿಸಿದರು. ಒಟ್ಟಿನಲ್ಲಿ ಶಾಲೆಯ ಸೃಜನಶೀಲ ಚಟುವಟಿಕೆಗೆ ಮೀಸಲಾದ ಮಕ್ಕಳ ದಿನಾಚರಣೆಯು ಹೃನ್ಮನ ಸೆಳೆದದ್ದು ಮಾತ್ರ ಸುಳ್ಳಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.