ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಹಿನ್ನೆಲೆ, ನ.18ಕ್ಕೆ ದೋಷ ಪರಿಹಾರ್ಥ ಬಲ್ನಾಡು ದೈವಸ್ಥಾನದಲ್ಲಿ ಸಮರ್ಪಣಾ ಸೇವೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವ ದೋಷ ಪರಿಹಾರರ್ಥ ಈಗಾಗಲೇ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಇದೀಗ ನ.18 ರಂದು ಸಂಜೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಸಮರ್ಪಣಾ ಸೇವಾ ಕಾರ್ಯಗಳು ನಡೆಯಲಿದೆ.

ದೈವಸ್ಥಾನದಲ್ಲಿ ರಂಗಪೂಜೆ, ಸೀರೆ, ಚೆಂಡು ಮಲ್ಲಿಗೆ, ಎಳನೀರು, ಬೆಳ್ಳಿಯ ಕಲಶದಲ್ಲಿ ಸ್ವರ್ಣದ ತುಂಡು, ಬೆಳ್ಳಿಯ ತುಂಡು, ಬೆಳ್ತಿಗೆ ಅಕ್ಕಿ, ಬಿಳಿ ಹೂ, ರೂ. 5ಒಳಗಿನ ಚಲಾವಣೆಯಲ್ಲಿರುವ ನಾಣ್ಯ ಹಾಕಿ ಕಲಶ ಭರ್ತಿ ಮಾಡಿ, ಯಥಾಶಕ್ತಿ ಚಿನ್ನದ ಕಾಲುಂಗುರ, ಬೆಳ್ಳಿಯ ಒಂದು ದೀಪದ ಜೊತೆಯಲ್ಲಿ ಚಿನ್ನದ ಕಾಲುಂಗುರ ಇರಿಸಿ, ದೇವಿಗೆ ಸಮರ್ಪಿಸಲಾಗುವುದು. ಈ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸಮಿತಿ ಸದಸ್ಯರು ಹಾಗು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.