ಕೆಯ್ಯೂರು ಶ್ರೀ  ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ 19ನೇ ವರ್ಷದ ವಾರ್ಷಿಕೋತ್ಸವ,  ಸನ್ಮಾನ ಕಾರ್ಯಕ್ರಮ

0

ಯುವ ಶಕ್ತಿ ಒಂದು ಅದ್ಬುತ ಶಕ್ತಿ, ದೇಶದ ಸಂಪತ್ತು : ಎಸ್ ಬಿ ಜಯರಾಮ ರೈ ಬಳಜ್ಜ

ಕೆಯ್ಯೂರು:ಶ್ರೀ ದುರ್ಗಾ ಸ್ಪೋಟ್ಸ್ ಕ್ಲಬ್ (ರಿ) ಕೆಯ್ಯೂರು19 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ,  ಸನ್ಮಾನ ಸಮಾರಂಭವು ಕೆಪಿಎಸ್ ಪ್ರಾಥಮಿಕ ವಿಭಾಗ ಶಾಲೆ ಕೆಯ್ಯೂರಿನಲ್ಲಿ ನ. 13 ರಂದು ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ. ಸಮಾಜದಲ್ಲಿ ಸಮಾಜವನ್ನು ಒಗ್ಗೂಡಿಸಿ ಕೊಂಡು ಒಂದು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವಂತದ್ದು  ಯುವಕರ ಸಾಧನೆ, ತುಂಬಾ ಮೆಚ್ಚುವಂತಹ ಕೆಲಸ, ಇತಂಹ ಸಮಾಜ ಸೇವೆ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

  ಸಭಾಧ್ಯಕ್ಷತೆಯನ್ನು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ ಗೌರವಧ್ಯಕ್ಷ  ಎಸ್ ಬಿ ಜಯರಾಮ ರೈ ಬಳಜ್ಜ  ಅಧ್ಯಕ್ಷತೆ ವಹಿಸಿ ಯುವ ಶಕ್ತಿ ಒಂದು ಅದ್ಬುತ ಶಕ್ತಿ , ಯುವಕರ ಒಗ್ಗಟಿನಿಂದ ಒಂದು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ, ದೇಶದ ಸಂಪತ್ತು, ರಾಷ್ಟ್ರದ ಸಂಪತ್ತು,   ಮುಂದೆಯೂ ಇತಂತಹ ಕೆಲಸ ಕಾರ್ಯಗಳು ಯುವಕರ ಸ್ಪೂರ್ತಿ ಯಿಂದ ನಡೆಯಲಿ  ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹತ್ತೋಂಬತ್ತು ವರ್ಷಗಳಲ್ಲಿ ನಡೆದ ಕಾರ್ಯ ಅಭಿವೃದ್ದಿಗಳ ಬಗ್ಗೆ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ  ಗೌರವ ಸಲಹೆಗಾರ ಎ.ಸದಾಶಿವ ಭಟ್ ಅರ್ತ್ಯಡ್ಕ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್.ಬಿ.ಎಂ., ಪುತ್ತೂರು ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಉದ್ಯಮಿ ಹರ್ಷಕುಮಾರ್ ರೈ ಮಾಡಾವು, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್‌ ಗೌರವಸಲಹೆಗಾರ ಹುಸೈನಾರ್ ಸಂತೋಷ್ ನಗರ,, ಕ್ಲಬ್ ನ ಸ್ಥಾಪಾಕದ್ಯಕ್ಷ ರಾಧಕೃಷ್ಣ ರೈ ಸಣಂಗಳ, ಕ್ಲಬ್‌ನ ಅಧ್ಯಕ್ಷ ದಿನೇಶ್ ಕೆ.ಎಸ್, ಉಪಸ್ಥಿತರಿದ್ದರು.    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ  ಕೆಪಿಎಸ್ ಕೆಯ್ಯೂರು  ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್, ಕೆದಂಬಾಡಿ ,ಕೆಯ್ಯೂರು ಸಿ.ಎ ಬ್ಯಾಂಕ್ ನ ನಿವೃತ್ತ ಶಾಖಾ ಪ್ರಬಂಧಕ ಸದಾಶಿವ ಭಟ್ ಅರ್ತ್ಯಡ್ಕ, ಪೋಲಿಸ್ ಇಲಾಖೆ ಮಂಗಳೂರು, ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ವಿಜೇತ ರಾಧಾಕೃಷ್ಣ ಪೂಜಾರಿ ಕೆಂಗುಡೇಲು, ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪ್ರವೀಣ್ ರೈ ಪಾಲ್ತಾಡಿ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎಮ್ ಇಬ್ರಾಹಿಂ ಮಾಸ್ಟರ್, ಕುಂಬ್ರ ಮೆಸ್ಕಾಂ ಸಿಬ್ಬಂದಿ ಗಣೇಶ್ ವೈ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ಶ್ರೀ ವಿಷ್ಣು ಯುವಶಕ್ತಿ ಬಳಗ ರಿ ಮಜ್ಜಾರಡ್ಕ, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಗೌರವಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಕ್ಲಬ್ ನ ಅಧ್ಯಕ್ಷ ಕೆ.ಎಸ್ ದಿನೇಶ್, ಮತ್ತು ಸದಸ್ಯರು, ಕೆಪಿಎಸ್ ಕೆಯ್ಯೂರು ಇದರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೂ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ರಾತ್ರಿ ಕು.ಶ್ರಮ್ಯ ರೈ ಮತ್ತು ಬಳಗ ಇವರಿಂದ ನೃತ್ಯ ಕಾರ್ಯಕ್ರಮ ಜರಗಿತು.ನಂತರ ಎಲ್.ಎನ್.ದೇವದಾಸ್ ಕಾಪೀಕಾಡ್ ರಚಿಸಿ,ನಟಿಸಿರುವ ತುಳು ಹಾಸ್ಯಮಯ ನಾಟಕ ನಾಯಿದ ಬಿಲ  ಎಂಬ ತುಳು ನಾಟಕ ನಡೆಯಿತು.  ವಿಧ್ಯಾರ್ಥಿಗಳು ಪ್ರಾರ್ಥಿಸಿ, ಕೃಷ್ಣಪ್ರಸಾದ್ ರೈ ಕಣಿಯಾರು ಪ್ರಸ್ತಾವಿಕವಾಗಿ ಸ್ವಾಗತಿಸಿ, ತಾರನಾಥ ರೈ ಕೊಡಂಬು ವಂದಿಸಿ, ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here