ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಮಹಿಳಾ ಕುಣಿತ ಭಜನಾ ತಂಡದ ವಾರ್ಷಿಕೋತ್ಸವ,ಗುರುವಂದನಾ ಕಾರ್ಯಕ್ರಮ

0

ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದ ರಂಗಮಂದಿರದಲ್ಲಿ ನ.12ರಂದು ಶ್ರೀ ಸದಾನಂದ ಆಚಾರ್ಯ ಕಾಣಿಯೂರು ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಶ್ರೀ ಷಣ್ಮುಖದೇವ ಮಹಿಳಾ ಕುಣಿತ ಭಜನಾ ತಂಡ ತನ್ನ ಪ್ರಥಮ ವರ್ಷವನ್ನು ಪೂರೈಸಿರುವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹರಿಪ್ರಸಾದ್ ಕುಂಟಿಕಾನ ನೆರವೇರಿಸಿ, ಬಳಿಕ ಮಾತನಾಡಿದ ಅವರು ಭಜನೆ ಹಾಗೂ ಭಜನೆಯ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ಅಧ್ಯಕ್ಷರಾದ  ಮಂಜುನಾಥ್ ದುಗ್ಗಳ ಇವರು ವಹಿಸಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶ್ರೀ ಷಣ್ಮುಖದೇವ ಮಹಿಳಾ ಕುಣಿತ ಭಜನಾ ತಂಡ ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಳಿತು ಭಜನೆ ಹಾಗೂ ಕುಣಿತ ಭಜನೆಯಲ್ಲಿ ಭಜನಾ ಸೇವೆಯನ್ನು ನೀಡುತ್ತಿರುವುದಲ್ಲದೇ ಬೇರೆ ಬೇರೆ ಗ್ರಾಮಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಲ್ಲಿನ ಭಜನಾ ಮಂದಿರ, ದೇವಸ್ಥಾನಗಳಲ್ಲಿ ಭಜನಾ ಸೇವೆಯನ್ನು ನೀಡುತ್ತಿರುವುದು ಸಂತೋಷದ ವಿಚಾರ, ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದರು.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ವತಿಯಿಂದ ನಮ್ಮ ಗ್ರಾಮದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಭಜನಾಸಕ್ತರಿಗೆ ಕುಣಿತ ಭಜನಾ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.

ಅದೇ ರೀತಿ ವೇದಿಕೆಯಲ್ಲಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟದ ಸ್ಥಾಪಕಾಧ್ಯಕ್ಷರಾದ  ಕೊರಗಪ್ಪ ಗೌಡ ಕುಂಟಿಕಾನ, ಭಜನಾ ತರಬೇತು ಗುರುಗಳಾದ ಸದಾನಂದ ಆಚಾರ್ಯ ಕಾಣಿಯೂರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಯಶೋದ ಬಾಬುರಾಜೇಂದ್ರ ಪೆರ್ಲಂಪಾಡಿ, ಶ್ರೀ ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಇದರ ಮುಖ್ಯ ಗುರುಗಳಾದ  ಕೃಷ್ಣವೇಣಿ, ಜೆ.ಸಿ.ಐ ಬೆಳ್ಳಾರೆ ಇದರ ಸಂಪನ್ಮೂಲ ವ್ಯಕ್ತಿ ಪದ್ಮನಾಭ ಸರಸ್ವತಿ ಮೂಲೆ ಇವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಷಣ್ಮುಖದೇವ ಮಹಿಳಾ ಕುಣಿತ ಭಜನಾ ತಂಡದ ಅಧ್ಯಕ್ಷರಾದ  ಪುಷ್ಪಲತಾ ಪೆರ್ಲಂಪಾಡಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಜನಾ ಗುರುಗಳಾದ ಸದಾನಂದ ಆಚಾರ್ಯ ಕಾಣಿಯೂರು ಇವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.  ಮಂಜುಳಾ ಉದಯ ಕುಮಾರ್ ಸದಾನಂದ ಆಚಾರ್ಯ ಇವರ ಕಿರು ಪರಿಚಯ ಓದಿದರು. ಭಜನಾ ತಂಡದ ವಾರ್ಷಿಕ ವರದಿಯನ್ನು ಶ್ವೇತಾ ಹರಿಪ್ರಸಾದ್ ವಾಚಿಸಿದರು. ಶ್ರೀ ಷಣ್ಮುಖದೇವ ಮಹಿಳಾ ಕುಣಿತ ಭಜನಾ ತಂಡದ ಅಧ್ಯಕ್ಷರಾದ  ಪುಷ್ಪಲತಾ ಪೆರ್ಲಂಪಾಡಿ ಸ್ವಾಗತಿಸಿ ವಂದಿಸಿದರು. ಗೀತಪ್ರಿಯ ಪ್ರಾರ್ಥಿಸಿ, ಶ್ರೀಮತಿ ಪೂರ್ಣಿಮಾ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಷಣ್ಮುಖದೇವ ಮಹಿಳಾ ಕುಣಿತ ಭಜನಾ ತಂಡದ ವತಿಯಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here